• September 18, 2022

ಒಂಟಿಯಾಗಿದ್ದ ಪೂಜಾರಿ ಕೈಕಾಲು ಕಟ್ಟಿ ಹತ್ಯೆ…ಚಿನ್ನಾಭರಣಕ್ಕಾಗಿ ನಡೆಯಿತಾ ಕೃತ್ಯ…?

ಒಂಟಿಯಾಗಿದ್ದ ಪೂಜಾರಿ ಕೈಕಾಲು ಕಟ್ಟಿ ಹತ್ಯೆ…ಚಿನ್ನಾಭರಣಕ್ಕಾಗಿ ನಡೆಯಿತಾ ಕೃತ್ಯ…?

ಒಂಟಿಯಾಗಿದ್ದ ಪೂಜಾರಿ ಕೈಕಾಲು ಕಟ್ಟಿ ಹತ್ಯೆ…ಚಿನ್ನಾಭರಣಕ್ಕಾಗಿ ನಡೆಯಿತಾ ಕೃತ್ಯ…?

ಹೆಚ್.ಡಿ.ಕೋಟೆ,ಸೆ18,Tv10 ಕನ್ನಡ
ಒಂಟಿಯಾಗಿದ್ದ ಪೂಜಾರಿಯ ಕೈಕಾಲು ಕಟ್ಟಿಹಾಕಿ ಕೊಲೆ ಮಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಗಣೇಶ್ ಪುರ ಗ್ರಾಮದಲ್ಲಿ ನಡೆದಿದೆ.ಕೆಂಪದೇವರು(60) ಮೃತ ಅರ್ಚಕ.ಚಿನ್ನಾಭರಣಕ್ಕಾಗಿ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.ಗಣೇಶ್ ಪುರದ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕೆಂಪದೇವರು ಸಮೀಪದ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.ಬೆಳಿಗ್ಗೆ ಎಷ್ಟುಹೊತ್ತಾದರೂ ಮನೆಯಿಂದ ಹೊರಬಾರದ ಕಾರಣ ಸ್ಥಳೀಯರು ಪರಿಶೀಲನೆ ನಡೆಸಿದಾಗ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಮನೆಯಲ್ಲಿದ್ದ ಪದಾರ್ಥಗಳು ಚೆಲ್ಲಾಪಿಲ್ಲಿಯಾಗಿದೆ.ದೇವಸ್ಥಾನಕ್ಕೆ ಸೇರಿದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.ಒಂಟಿಯಾಗಿದ್ದ ಕಾರಣ ಕಳುವಾದ ಪದಾರ್ಥಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿಲ್ಲ.ಘಟನೆ ನಡೆದ ಸ್ಥಳಕ್ಕೆ ಎಸ್ಪಿ ಆರ್. ಚೇತನ್ ಹಾಗೂ ಅಡಿಷನಲ್ ಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Leave a Reply

Your email address will not be published.