ಅರಳಿ ಮರ ನೆಡುವ ಮೂಲಕ ಸಮಾಜಕ್ಕೆ ಮಾದರಿ ಹಿಂದುಳಿದ ವರ್ಗಗಳ ಮೊರ್ಚಾ….
- MysoreUncategorized
- September 18, 2022
- No Comment
- 128
ಅರಳಿ ಮರ ನೆಡುವ ಮೂಲಕ ಸಮಾಜಕ್ಕೆ ಮಾದರಿ ಹಿಂದುಳಿದ ವರ್ಗಗಳ ಮೊರ್ಚಾ….
ಇಂದು ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಸೇವಾ ಪಾಕ್ಷಿಕ ದ ಅಡಿಯಲ್ಲಿ ಅರಳಿಮರ ಗಿಡ ನೆಡಸುವ ಅಭಿಯಾನಕ್ಕೆ ಮಂತ್ರಿ ಗಳಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರು ಚಾಲನೆ ನೀಡಿದರು..
ವಾಯುಮಾಲಿನ್ಯ ತಡೆಗಟ್ಟುವಲ್ಲಿ ಹಿಂದುಳಿದ ವರ್ಗಗಳ ಮೊರ್ಚಾ ಪ್ರಯತ್ನ…
ಕರ್ನಾಟಕ ರಾಜ್ಯ ಬಾ.ಜ.ಪ.ಘಟಕವು ಸನ್ಮಾನ್ಯ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕ ರಿಗೆ ಹಾಗೂ ಪರಿಸರಕ್ಕೆ ಅನೂಕೊಲ ವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಿಂದುಳಿದ ವರ್ಗಗಳ ಮೊರ್ಚಾದ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಶಾಲಾ ಕಾಲೇಜು ಅವರಣ,ಸಾರ್ಕಾರಿ ಸ್ಥಳ,ಜಿಲ್ಲಾ ಆಸ್ಪತ್ರೆ, ಸ್ಮಶಾನದಲ್ಲಿ, ಪಾರ್ಕ್ ಗಳು ಇನ್ನೂ ಮುಂತಾದ ಸ್ಥಳಗಳಲ್ಲಿ ಅರಳಿಮರ ಗಳನ್ನು ಸಾರ್ವಜನಿಕ ರೊಂದಿಗೆ ನೆಡಸ ಬೇಕಾಗಿರುವುದರಿಂದ ಇಂದು ಸಾಂಕೇತಿಕವಾಗಿ ಸರ್ಕಾರಿ ಅಥಿತಿ ಗೃಹ ದಲ್ಲಿ ಚಾಲನೆ ನೀಡಲಾಯಿತು..
ನಂತರ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ಯವರು ಪರಿಸರ ನಮ್ಮೆಲ್ಲರ ಆಸ್ತಿ, ಬಾ.ಜ.ಪ.ಘಟಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಯಾವುದೇ ರೀತಿಯ ಆಡಂಬರ ವಿಲ್ಲದೆ ಸಾರ್ವಜನಿಕ ರಿಗೆ ಹಾಗೂ ದೇಶಕ್ಕೆ ಅನುಕೂಲ ವಾಗುವ ನಿಟ್ಟಿನಲ್ಲಿ,ಮುಂದೊಂದು ದಿನ ವಾಯುಮಾಲಿನ್ಯದ ಆಗುವ ಅನಾಹುತ ತಡೆಗಟ್ಟಲು ಬಾ.ಜ.ಪ.ಯುವಕರು ಅರಳಿಮರ ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಅಭಿಪ್ರಾಯ ಪಟ್ಟರು..
ನಾಗೇಂದ್ರ ರವರು ಮಾತನಾಡಿ ಅರಳಿಮರ ಶ್ರೇಷ್ಠ ವಾದ ಮರ ಹಾಗೂ ವೈಜ್ಞಾನಿಕ ವಾಗಿ ಸಾರ್ವಜನಿಕ ರು ಹೆಚ್ಚು ಇರುವ ಸ್ಥಳಗಳಲ್ಲಿ ಅರಳಿಮರ ದ ಅವಶ್ಯಕತೆ ಇದೆ ಪಾರ್ಕಿಗೊಂದು ಅರಳಿಮರ ಕಡ್ಡಾಯವಾಗಿ ಇರಬೇಕು ಹಾಗೆ ಈಗಾಗಲೇ ಮೈಸೂರಿನ ಹೊರ ವರ್ತುಲ ರಸ್ತೆಯಲ್ಲಿ ಸಾವಿರಾರು ಅರಳಿಮರವನ್ನು ಸಂಘ ಸಂಸ್ಥೆಗಳ ಒಟ್ಟುಗೂಡಿ ನೆಡುವ ಮೂಲಕ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದರು..
ಸಂಧರ್ಭದಲ್ಲಿ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಸಚಿವ ರಾದ ಕೋಟಾ ಶ್ರೀನಿವಾಸ ಪೂಜಾರಿ, ಚಾಮರಾಜ ಕ್ಷೇತ್ರದ ಶಾಸಕ ರಾದ ಎಲ್.ನಾಗೇಂದ್ರ, ಭಾ.ಜ.ಪ.ನಗರ ಅಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಉಪ ಮೇಯರ್ ರೂಪ ಯೋಗೇಶ್ ನಗರಪಾಲಿಕೆ ಸದಸ್ಯ ಸತೀಶ್,ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್,ಮಣಿರತ್ನಂ, ಸೋಮಶೇಖರ್ ರಾಜು, ಹರೀಶ್,ಪುನೀತ್,ರಮೇಶ್,ಚಿಕ್ಕಮ್ಮ ಬಸವರಾಜ್, ಶಿವರಾಜ್, ಕೃಷ್ಣ ಮೂರ್ತಿ,ಜಗದೀಶ್, ವಿಜಯ್,ಸೂರಜ್, ಅಂಕಿತ್,ಮುಂತಾದವರು ಇದ್ದರು