- September 19, 2022
ರಸ್ತೆ ಅಪಘಾತ…ಬೈಕ್ ಸವಾರ ಸ್ಥಳದಲ್ಲೇ ಸಾವು…ಇಬ್ಬರಿಗೆ ಗಂಭೀರ ಗಾಯ…

ರಸ್ತೆ ಅಪಘಾತ…ಬೈಕ್ ಸವಾರ ಸ್ಥಳದಲ್ಲೇ ಸಾವು…ಇಬ್ಬರಿಗೆ ಗಂಭೀರ ಗಾಯ…

ತಿ.ನರಸೀಪುರ,ಸೆ19,Tv10 ಕನ್ನಡ
ಬೈಕ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ
ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.
ಇನ್ನಿಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟಿ. ನರಸೀಪುರ ಮುಖ್ಯ ರಸ್ತೆಯ ಹಿಂಡವಾಳು ಗ್ರಾಮದ ಬಳಿ ಘಟನೆ ನಡೆದಿದೆ.
ಹಳೆ ಕೆಂಪಯ್ಯನಹುಂಡಿ ಗ್ರಾಮದ ಅಭಿಜಿತ್ (26) ಸ್ಥಳದಲ್ಲೇ ಮೃತಪಟ್ಟ ಯುವಕ.
ಪ್ರಸನ್ನ (22), ಕಾರ್ತಿಕ್ (20)ಗಂಭೀರ ಗಾಯಗೊಂಡವರು.
ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…