• September 20, 2022

ಹೋರಾಟಗಾರರ ವಿರುದ್ದ ತಹಸೀಲ್ದಾರ್ ರತ್ನಾಂಬಿಕ ಕೆಂಡಾಮಂಡಲ…ದಾಖಲೆಗಳನ್ನ ಎಸೆದಾಡಿ ಆಕ್ರೋಷ…ಹೈಡ್ರಾಮ ವಿಡಿಯೋ ನೋಡಿ…

ಹೋರಾಟಗಾರರ ವಿರುದ್ದ ತಹಸೀಲ್ದಾರ್ ರತ್ನಾಂಬಿಕ ಕೆಂಡಾಮಂಡಲ…ದಾಖಲೆಗಳನ್ನ ಎಸೆದಾಡಿ ಆಕ್ರೋಷ…ಹೈಡ್ರಾಮ ವಿಡಿಯೋ ನೋಡಿ…

ಹೋರಾಟಗಾರರ ವಿರುದ್ದ ತಹಸೀಲ್ದಾರ್ ರತ್ನಾಂಬಿಕ ಕೆಂಡಾಮಂಡಲ…ದಾಖಲೆಗಳನ್ನ ಎಸೆದಾಡಿ ಆಕ್ರೋಷ…ಹೈಡ್ರಾಮ ವಿಡಿಯೋ ನೋಡಿ…

ಹೆಚ್.ಡಿ.ಕೋಟೆ,ಸೆ20,Tv10 ಕನ್ನಡ
ಲಂಚ ಪಡೆಯುತ್ತಿರುವ ಸಿಬ್ಬಂದಿಗಳ ವರ್ತನೆ ಬಗ್ಗೆ ಮಾಹಿತಿ ಪಡೆಯಲು ಹೋದ ಹೋರಾಟಗಾರರ ವಿರರುದ್ದ ಹೆಚ್.ಡಿ.ಕೋಟೆ ತಾಲೂಕು ತಹಸೀಲ್ದಾರ್ ರತ್ನಾಂಬಿಕ ಮಾತಿನ ಚಕಮಕಿ ನಡೆಸಿ ಹರಿಹಾಯ್ದ ಘಟನೆ ಮಿನಿವಿಧಾನ ಸೌಧದಲ್ಲಿ ನಡೆದಿದೆ. ಹೋರಾಟಗಾರರ ವಿರುದ್ದ ಕೂಗಾಡಿ ಆವೇಷಭರಿತರಾಗಿ ಮಾತನಾಡಿ ದಾಖಲೆಗಳನ್ನ ಎಸೆದಾಡಿದ ವಿಡಿಯೋ ವೈರಲ್ ಆಗಿದೆ. ಹೆಚ್ ಡಿ ಕೋಟೆ ತಾಲ್ಲೂಕು ಕಚೇರಿಯಲ್ಲಿ ಹೈಡ್ರಾಮ ನಡೆದಿದೆ.ತಹಶೀಲ್ದಾರ್ ಆವೇಷ ನೋಡಿ ಜನ ದಿಗ್ಬ್ರಾಂತರಾಗಿದ್ದಾರೆ.
ಪ್ರಕೃತಿ ವಿಕೋಪದಡಿ ಮನೆಗಳ ಪರಿಹಾರ ವಿಚಾರ
ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಲಂಚ ಪಡೆಯುತ್ತಾರೆ ಎಂಬ ಆರೋಪ ಬಂದಿದ್ದು ಈ ಬಗ್ಗೆ
ರೈತ ಸಂಘದ ನಾಗರಾಜು ಮತ್ತು ದಸಂಸ ಚಾ.ಶಿವಕುಮಾರ್ ಮಾಹಿತಿ ನೀಡಲು ಹೋಗಿದ್ದಾರೆ.
ಈ ವೇಳೆ ತಹಶೀಲ್ದಾರ್ ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೆಂಡಾಮಂಡಲರಾದ ತಹಶೀಲ್ದಾರ್ ರತ್ನಾಂಬಿಕ
ಟೇಬಲ್ ಮೇಲಿದ್ದ ದಾಖಲೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಸಮಾಧಾನ ಪಡಿಸಲು ಸಿಬ್ಬಂದಿಗಳು ಹರಸಾಹಸಪಟ್ಟಿದ್ದಾತರೆ.ಕರ್ತವ್ಯಕ್ಕೆ ರಜೆ ಹಾಕಿ ದೂರು ನೀಡುವ ಬೆದರಿಕೆ ಹಾಕಿದ್ದಾರೆ
ತಹಶೀಲ್ದಾರ್ ರತ್ನಾಂಬಿಕ. ಕಚೇರಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು…

Spread the love

Leave a Reply

Your email address will not be published.