ಜಮೀನಿನಲ್ಲಿ ಅಕ್ರಮ ಗಾಂಜಾ ಪತ್ತೆ…ವ್ಯಕ್ತಿ ಬಂಧನ…
- Uncategorized
- September 20, 2022
- No Comment
- 129
ಜಮೀನಿನಲ್ಲಿ ಅಕ್ರಮ ಗಾಂಜಾ ಪತ್ತೆ…ವ್ಯಕ್ತಿ ಬಂಧನ…
ಶ್ರೀರಂಗಪಟ್ಟಣ,ಸೆ20,Tv10 ಕನ್ನಡ
ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿದ್ದ ವ್ಯಕ್ತಿಯನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಮೈಸೂರಿನ ಸುಭಾಷ್ ನಗರದ ಕೃಷ್ಣಮೂರ್ತಿ (೫೭) ಬಂಧಿತ ಆರೋಪಿ. ಶ್ರೀರಂಗಪಟ್ಟಣ ತಾಲ್ಲೂಕಿನ ಮೊಗರಹಳ್ಳಿ ಗ್ರಾಮದ ಸರ್ವೇ ನಂ೩೧ ರಲ್ಲಿನ ಕೃಷ್ಣಮೂರ್ತಿ ಎಂಬುವವರು ತಮ್ಮ ತೋಟದ ಮನೆಯಲ್ಲಿ ಅಕ್ರಮವಾಗಿ ಒಣ ಗಾಂಜಾ ಶೇಖರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮನೆಯ ಮುಂಭಾಗದಲ್ಲಿ ನಿಂತಿದ್ದ ಸುಜೂಕಿ ಆಕ್ಸಿಸ್-೧೨೫ ಸ್ಕೂಟರ್‌ನಲ್ಲಿ ೧.೧೦೦ ಗ್ರಾಂ ಒಣ ಗಾಂಜಾ ಪತ್ತೆಯಾಗಿದೆ.
ಆತನನ್ನು ವಿಚಾರಣೆ ನಡೆಸಿದಾಗ ತಾನೆ ತೋಟದಲ್ಲಿ ಬೆಳೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ತನ್ನ ಬಾಳೆಗಿಡದ ತೋಟದ ಮದ್ಯದಲ್ಲಿ ೧೦ ಅಡಿಯ-೧೦, ೯ ಅಡಿಯ-೦೫, ೬ ಅಡಿಯ-೧೦, ೫ ಅಡಿಯ-೦೫, ಗಾಂಜಾ ಗಿಡಗಳಿದ್ದು, ಒಟ್ಟು ೩೦ ಹೂವು, ತೆನೆಯಿಂದ ಕೂಡಿದ ಹಸಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಎನ್.ಡಿ.ಪಿ.ಎಸ್ ಕಾಯಿದೆ ೧೯೮೫ರ ಕಲಂ ೮(b),೮(ಛಿ) ೨೦(b)(i), ೨೦(b)(ii)(ಃ) ನಡಿ ಆರೋಪಿ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾದೀಶರ ಮುಂದೆ ಹಾಜರು ಪಡಿಸಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಡಾ|| ಮಹಾದೇವಿ ಬಾಯಿ, ಉಪ ಅದೀಕ್ಷಕ ಎನ್.ಟಿ ಆನಂದಕುಮಾರ್, ನಿರೀಕ್ಷಕರಾದ ಹೆಚ್.ಡಿ ರಮ್ಯ, ಬಿ.ಸಿ ರಮೇಶ್, ಉಪ ನಿರೀಕ್ಷಕರಾದ ಎಂ. ರಾಜಶೇಖರ, ಬಿ. ಶಿವಣ್ಣ, ಕಂದಾಯ ಇಲಾಖೆ ಆರ್‌ಐ ಉಮೇಶ್, ಗ್ರಾಮ ಲೆಕ್ಕಿಗ ಮಹೇಂದ್ರ, ಸಿಬ್ಬಂದಿಗಳಾದ ರಾಮು ಹೆಚ್.ವಿ, ದಿಲೀಪ್ ಕುಮಾರ್ ಪಿ.ಜಿ, ರಘು ಎಸ್, ನಾಗರಾಜು ಎಂ.ಜಿ, ಸಂದೀಪ ಬಿ.ಆರ್ ಇತರರು ಇದ್ದರು.