ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಮದುವೆ ಆದ ಒಂದು ವರ್ಷಕ್ಕೆ ಕೈಕೊಟ್ಟ ಪತಿ…ಅತಂತ್ರಕ್ಕೆ ಸಿಲುಕಿದ ಪತ್ನಿ…ಗಂಡ ಸೇರಿದಂತೆ 16 ಮಂದಿ ವಿರುದ್ದ FIR ದಾಖಲು…

ಹುಣಸೂರು,ಸೆ23,Tv10 ಕನ್ನಡ
ಪ್ರೀತಿಸಿ ವಿವಾಹವಾದ ಜೋಡಿ ಒಂದು ವರ್ಷಕ್ಕೆ ಬೇರ್ಪಟ್ಟಿದೆ.ಹೆತ್ತವರು ಹಾಗೂ ಸಂಭಂಧಿಕರ ಚಿತಾವಣೆಯಿಂದ ಪತಿರಾಯ ಕೈಕೊಟ್ಟಿದ್ದಾನೆ.ಜಾತಿ ನಿಂದನೆ ಮಾಡಿ ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿ ದಂಪತಿಯನ್ನ ದೂರ ಮಾಡಿದ ಹಿನ್ನಲೆ ವಂಚನೆಗೆ ಒಳಗಾದ ವಿವಾಹಿತೆ ನ್ಯಾಯಕ್ಕಾಗಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಗಂಡ ಸೇರಿದಂತೆ ಒಂದೇ ಕುಟುಂಬದ 16 ಮಂದಿ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಚಿತ್ರದುರ್ಗದ ಅಶ್ವಿನಿ(24) ಪತಿಯಿಂದ ವಂಚನೆಗೆ ಒಳಗಾದ ನತದೃಷ್ಟೆ.ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ನ ಅಶ್ವಿನಿ ಜೂನ್ 2021 ರಲ್ಲಿ ಪ್ರೀತಿಸಿ ಮದುವೆ ಆಗಿದ್ದಳು.ಇವರಿಬ್ಬರ ಪ್ರೀತಿಗೆ ಇಬ್ಬರ ಕುಟುಂಬಸ್ಥರೂ ಸಹ ಒಪ್ಪಿಗೆ ನೀಡಿದ್ದರು.ನಂತರದ ದಿನಗಳಲ್ಲಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆದಿದೆ.ಜಾತಿ ಕಾರಣ ನೀಡಿರುವುದಲ್ಲದೆ ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ.ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಅಪಪ್ರಚಾರ ಮಾಡಿದ್ದಾರೆ.ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್ ಗೆ ಮತ್ತೊಂದು ಮದುವೆಗೆ ಸಂಭಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ.ದಲಿತ ಹುಡುಗಿ ಎಂದು ಕೊಟ್ಟಿಗೆಯಲ್ಲಿ ಇರಿಸಿದ್ದಾರೆ.ನ್ಯಾಯ ಕೇಳಲು ಹೋದ ಅಶ್ವಿನಿಗೆ ಅತ್ತೆ ಹಾಗೂ ಮಾವ ಹಲ್ಲೆ ಮಾಡಲು ಮುಂದಾಗಿದ್ದಾರೆ.ಗಂಡ ಹಾಗೂ ಮನೆಯವರಿಂದ ತ್ಯಜಿಸಲ್ಪಟ್ಟ ಅಶ್ವಿನಿ ಇದೀಗ ಅತಂತ್ರಕ್ಕೆ ಸಿಲುಕಿದ್ದಾರೆ.ಪ್ರೀತಿಸಿ ಮದುವೆ ಆದ ಗಂಡನಿಗಾಗಿ ಪೊಲೀಸ್ ಠಾಣೆ ಮೆಟ್ಟಲೇರಿರುವ ಅಶ್ವಿನಿಗೆ ನ್ಯಾಯ ದೊರೆಯಬೇಕಿದೆ.ಅಶ್ವಿನಿಯ ಹೆತ್ತವರು ಮಗಳ ಪರಿಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *