• September 27, 2022

ಕಾರ್ ಹಾಗೂ ಸರ್ಕಾರಿ ಬಸ್ ಢಿಕ್ಕಿ…ಟೆಕ್ಕಿ ಸಾವು…ಫಿಯಾನ್ಸಿ ಆಸ್ಪತ್ರೆಗೆ ದಾಖಲು…ಚಾಮುಂಡಿ ದರುಶನ ಪಡೆದು ಹಿಂದಿರುಗುವ ವೇಳೆ ದುರ್ಘಟನೆ…

ಮೈಸೂರು,ಸೆ27,Tv10 ಕನ್ನಡ
ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಟೆಕ್ಕಿ ಸಾವನ್ನಪ್ಪಿದ್ದು ಫಿಯಾನ್ಸಿ ಆಸ್ಪತ್ರೆಗೆ ದಾಖಲಾದ ಘಟನೆ ಮೈಸೂರು ಬೆಂಗಳೂರು ರಸ್ತೆ ಕಳಸ್ತವಾಡಿಯಲ್ಲಿ ನಡೆದಿದೆ.ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಭರತ್ ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದು ಭಾವಿ ಪತ್ನಿ ಚೈತ್ರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವಿಯ ದರುಶನ ಪಡೆದ ಜೋಡಿ ಬೆಂಗಳೂರಿಗೆ ತಮ್ಮ ಕಾರ್ ನಲ್ಲಿ ಹಿಂದಿರುಗುವಾಗ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ.ಬಸ್ ಬ್ಯಾರಿಕೇಡ್ ದಾಟಿ ಬಂದು ಢಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಕಾರು ಆಂಜನೇಯ ದೇವಸ್ಥಾನದ ಹಿಂಬಾಗದ ಗೋಡೆ ವರೆಗೆ ಹಾರಿಬಿದ್ದಿದೆ.ಭರತ್ ಪ್ರಸಾದ್ ಸಾವನ್ನಪ್ಪಿದ್ದಾರೆ.ಭರತ್ ಪ್ರಸಾದ್ ಹಾಗೂ ಚೈತ್ರ ನಡುವೆ ಮದುವೆಗೆ ಫಿಕ್ಸ್ ಆಗಿತ್ತು.ದಿನಾಂಕ ನಿಗದಿಯಾಗಬೇಕಿತ್ತು.ಎನ್.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Leave a Reply

Your email address will not be published.