ದಸರಾ ಸಂಭ್ರಮ…ಸಚಿವ ಎಸ್.ಟಿ.ಸೋಮಶೇಖರ್ ರಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ,ಕರಕುಶಲ ಪ್ರಾತ್ಯಕ್ಷಿಕೆ ಉದ್ಘಾಟನೆ…
- MysoreTV10 Kannada Exclusive
- October 1, 2022
- No Comment
- 130
ದಸರಾ ಸಂಭ್ರಮ…ಸಚಿವ ಎಸ್.ಟಿ.ಸೋಮಶೇಖರ್ ರಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ,ಕರಕುಶಲ ಪ್ರಾತ್ಯಕ್ಷಿಕೆ ಉದ್ಘಾಟನೆ…
ಮೈಸೂರು,ಅ1,Tv10 ಕನ್ನಡ
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಮಕ್ಕಳ ಪ್ರತಿಭೆಯನ್ನು ಗುರುತಿಸುವುದಕ್ಕೆ ದಸರಾ ಚಿತ್ರಕಲಾ ಪ್ರದರ್ಶನವು ಉತ್ತಮ ವೇದಿಕೆಯಾಗಿದೆ. ಪೋಷಕರು ಹಾಗೂ ಶಿಕ್ಷಕರಿಗೂ ಮಕ್ಕಳ ಚಿತ್ರಕಲಾ ಪ್ರದರ್ಶನವು ಸಂತೋಷನ್ನುಂಟು ಮಾಡಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. 1 ರಿಂದ 4 ವಯೋಮಿತಿ ಗೆ(ಪ್ರಾಣಿ,ಪಕ್ಷಿ,ಪರಿಸರ)5-7ರವರೆಗೆ(ಮೈಸೂರಿನ ಸುಂದರ ತಾಣಗಳು,ಸ್ಮಾರಕಗಳು, ಸಾಧಕರು),8-10ರವರೆಗೆ(75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ)ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಳಿಕ ಕಲಾಮಂದಿರ ಆವರಣದಲ್ಲಿ ಆಯೋಜಿಸಿದ್ದ ಕಿನ್ನಾಳ ಕಲೆ, ಕೌದಿ ಮತ್ತು ಕಸೂತಿ ಕಲೆ, ಕುಂಬಾರಿಕೆ, ಇನ್ಲೆ ಕಲೆ ಚರಕದಿಂದ ನೂಲುವಿಕೆ, ಕೈಮಗ್ಗದ ನೇಕಾರಿಕೆ, ವರ್ಲಿ ಕಲೆ, ಚನ್ನಪಟ್ಟಣ ಗೊಂಬೆ ತಯಾರಿಕೆ, ಬಿದಿರು ಬೆತ್ತದ ಬುಟ್ಟಿ ಹೆಣಿಗೆ, ಮದರಂಗಿ ಕಲೆ, ವ್ಯಂಗ್ಯ ಚಿತ್ರಕಲೆ, ಸೂಕ್ಷ್ಮ ಕಲೆ ಪ್ರದರ್ಶನ ಕರಕುಶಲ ಪ್ರಾತ್ಯಕ್ಷಿಕೆ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಳಿಗೆಗಳಿಗೆ ಭೇಟಿ ನೀಡಿ, ಚರಕದಿಂದ ತಯಾರಿಸಿದ 23 ಟವೆಲ್‌ಗಳು ಸೇರಿದಂತೆ ಗೊಂಬೆಗಳು, ಮಣ್ಣಿನ ದೀಪಗಳು, ಬಿದಿರಿನಿಂದ ತಯಾರಿಸಿದ ಕೀ ಬಂಚ್‌ಗಳನ್ನು ಖರೀದಿಸಿ ಸಮಿತಿಯ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು…