
ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು…
- TV10 Kannada Exclusive
- October 15, 2022
- No Comment
- 168
ಬಗೆಹರಿಯದ ಕಬ್ಬು ಬೆಲೆ ದರ ನಿಗದಿ…ಸರ್ಕಾರಕ್ಕೆ 5 ದಿನಗಳ ಗಡುವು…

ಬೆಂಗಳೂರು,ಅ15,Tv10 ಕನ್ನಡ ಕಬ್ಬುದರ ನಿಗದಿ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.ಇಂದು ಬೆಂಗಳೂರಿನಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತಪ್ರತಿನಿಧಿಗಳ ಸಭೆಯಲ್ಲಿ ಅಂತಮ ತೀರ್ಮಾನ ಆಗಿಲ್ಲ. ರೈತ ಮುಖಂಡರು ಸರ್ಕಾರಕ್ಕೆ 20 ರ ವರೆಗೆ ಅಂದರೆ ಐದು ದಿನಗಳ ಅಂತಿಮ ಗಡುವು ನೀಡಿದ್ದಾರೆ.
ವಿಧಾನಸೌಧದಲ್ಲಿ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು, ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದರು ಯಾವುದೇ ತೀರ್ಮಾನವಾಗಲಿಲ್ಲ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ ಸಭೆಯಲ್ಲಿ ರೈತ ಮುಖಂಡರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಎರಡು ದಿನದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ರೈತ ಪ್ರತಿನಿಧಿಗಳ ಸಭೆ ಕರೆದು ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ರೈತರು ಇವತ್ತೇ ಕಬ್ಬುದರ ನಿಗದಿಯಾಗಬೇಕು ಎಂದು ಪಟ್ಟು ಹಿಡಿದಾಗ ಮುಖ್ಯಮಂತ್ರಿಗಳು ಪ್ರವಾಸ ಹೋಗಿರುವ ಕಾರಣ ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ರೈತರ ಮನವೊಲಿಸಿದರು.
ಪಂಜಾಬ್ ರಾಜ್ಯದಲ್ಲಿ 3800 ಉತ್ತರ ಪ್ರದೇಶದಲ್ಲಿ 3500 ಗುಜರಾತ್ ನಲ್ಲಿ 4400 ದರ ನಿಗದಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಇದನ್ನು ಮನಗಂಡು ಬೆಲೆಯನ್ನ ನ್ಯಾಯಯುತವಾಗಿ ನಿಗದಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.ರೈತ ಸಂಘದ ಬಡಗಲಪುರ ನಾಗೇಂದ್ರ, ಚೂನಪ್ಪ ಪೂಜಾರಿ, ರಮೇಶ್ ಹೂಗಾರ್, ಜೋಶಿ, ನಾರಾಯಣರೆಡ್ಡಿ, ಸುನೀತಾ ಪುಟ್ಟಣ್ಣಯ್ಯ, ಸುರೇಶ್ ಪಾಟೀಲ್,
ಎಂ ವಿ ಗಾಡಿ, ತೇಜಸ್ವಿ ಪಟೇಲ್,
ಆತ್ತಹಳಿ ದೇವರಾಜ್ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಗೇರಿ, ದಕ್ಷಿಣ ಭಾರತ ಸಕ್ಕರೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಲ ಅಧ್ಯಕ್ಷ ಜಗದೀಶ್ ಗುಡುಗಂಟಿ ಇನ್ನೂ ಮುಂತಾದ 200 ಹೂ ಹೆಚ್ಚು ರೈತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು…