ಮಹಾಪೌರರ ವಾರ್ಡ್ ವಿಸಿಟ್…ಅಹವಾಲು ಸ್ವೀಕಾರ…ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ…
- Mysore
- October 16, 2022
- No Comment
- 204
ಮಹಾಪೌರರ ವಾರ್ಡ್ ವಿಸಿಟ್…ಅಹವಾಲು ಸ್ವೀಕಾರ…ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ…

ಮೈಸೂರು,ಅ16,Tv10 ಕನ್ನಡ
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ರಲ್ಲಿ ಮೇಯರ್ ಶಿವಕುಮಾರ್ ಹಾಗೂ ಅಧಿಕಾರಿಗಳು ಇಂದು ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲುಗಳನ್ನ ಸ್ವೀಕರಿಸಿದರು. ವಾರ್ಡ್ ಅಭಿವೃಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.ಗಾಂಧಿನಗರದ ಡಾ.ಬಿ ಆರ್ ಅಂಬೇಡ್ಕರ್ ವೃತದಿಂದ ಪಾದಯಾತ್ರೆ ಆರಂಭಿಸಿದರು.ಯು.ಜಿ.ಡಿ.ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದವು.ರಸ್ತೆಗಳನ್ನ ಅಭಿವೃದ್ದಿ ಪಡಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.ಶಿಥಿಲಗೊಂಡ ಗರಡಿ ಮನೆ ಹಾಗೂ ಸಮುದಾಯ ಭವನಗಳನ್ನ ಅಭಿವೃದ್ದಿ ಪಡಿಸುವಂತೆ ಸ್ಥಳೀಯ ಮುಖಂಡರು ಮನವಿ ಮಾಡಿದರು. ಪಾದಯಾತ್ರೆಯಲ್ಲಿ ವಾರ್ಡ್ ಗೆ ಸಂಭಂಧಪಟ್ಟ ಅಧಿಕಾರಿಗಳು ಮೇಯರ್ ಗೆ ಸಾಥ್ ನೀಡಿದರು…