
16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ…
- TV10 Kannada Exclusive
- October 17, 2022
- No Comment
- 237
16 ಕೆರೆಗಳನ್ನ ನಿರ್ಮಿಸಿ ಪ್ರಧಾನಿಯಿಂದ ಶಹಬ್ಬಾಸ್ ಎನ್ನಿಸಿಕೊಂಡಿದ್ದ ಕಾಮೇಗೌಡರು ಇನ್ನಿಲ್ಲ…

ಮಂಡ್ಯ,17,Tv10 ಕನ್ನಡ
ಆಧುನಿಕ ಭಗೀರಥ ಎಂದೇ ಖ್ಯಾತಿ ಪಡೆದಿದ್ದ ಮಳವಳ್ಳಿಯ ಕಾಮೇಗೌಡರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.16 ಕೆರೆಗಳನ್ನ ನಿರ್ಮಿಸಿ ದೇಶದ ಗಮನ ಸೆಳೆದಿದ್ದ ಕಾಮೇಗೌಡರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.86 ವರ್ಷದ ಕಾಮೇಗೌಡರ ಸಾಧನೆಯನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಮನ್ ಕೀ ಬಾತ್ ನಲ್ಲಿ ಶ್ಲಾಘಿಸಿದ್ದರು.ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದ ಕಾಮೇಗೌಡರಿಗೆ ಇಬ್ಬರು ಮಕ್ಕಳಿದ್ದಾರೆ…