ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಆತ್ಮಹತ್ಯೆ ಮಾಡ್ಕೋತೀವಿ…3 ವರ್ಷದ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬದ ಅಳಲು…
- CrimeMysore
- October 17, 2022
- No Comment
- 125
ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಆತ್ಮಹತ್ಯೆ ಮಾಡ್ಕೋತೀವಿ…3 ವರ್ಷದ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬದ ಅಳಲು…
ಹುಣಸೂರು,ಅ17,Tv10 ಕನ್ನಡ
ಮೂರು ವರ್ಷಗಳ ಹಿಂದೆ ಚಿನ್ನಾಭರಣ ಕಳೆದುಕೊಂಡ ರೈತ ಕುಟುಂಬವೊಂದು ಅತಂತ್ರಕ್ಕೆ ಸಿಲುಕಿದೆ.ಮನೆ ಬೀಗ ಮುರಿದು ಚಿನ್ನಾಭರಣ ಲೂಟಿ ಮಾಡಿದ ಕಳ್ಳನನ್ನ ಹಿಡಿಯುವಲ್ಲಿ ವಿಫಲರಾದ ಪೊಲೀಸರ ವಿರುದ್ದ ಆಕ್ರೋಷ ಹೊರಹಾಕಿರುವ ಕುಟುಂಬ ನ್ಯಾಯ ದೊರೆಯದಿದ್ದಲ್ಲಿ ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯ ಈ ರೈತ ಕುಟುಂಬ ನೆರವಿಗೆ ಪೊಲೀಸ್ ಅಧಿಕಾರಿಗಳು ಬರುವರೇ ಎಂಬ ಪ್ರಶ್ನೆ ಉದ್ಭವಿಸಿದೆ..
ಮಾರ್ಚ್ 1,2019 ರಂದು ಹಿರಿಕ್ಯಾತನಹಳ್ಳಿಯ ವಿಜಯ್ ಕುಮಾರ್ ರವರ ಮನೆಗೆ ಕನ್ನ ಹಾಕಿದ ಖದೀಮರು 10 ಲಕ್ಷ ಮೌಲ್ಯದ 520 ಗ್ರಾಂ ಚಿನ್ನಾಭರಣ ಹಾಗೂ 16 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.ಈ ಬಗ್ಗೆ ವಿಜಯಕುಮಾರ್ ರವರು ಸಂಶಯಾಸ್ಪದ ವ್ಯಕ್ತಿಗಳ ಹೆಸರು ತಿಳಿಸಿ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.FIR ದಾಖಲಾಗಿ 3 ವರ್ಷ ಕಳೆದಿದೆ.ಇದುವರೆಗೆ ಆರೋಪಿಯೂ ಪತ್ತೆಯಾಗಿಲ್ಲ ಪದಾರ್ಥಗಳೂ ಸಿಕ್ಕಿಲ್ಲ.ಪೊಲೀಸ್ ಠಾಣೆಗೆ ಸುತ್ತಾಡಿ ಬಸವಳಿದಿರುವ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.ಪೊಲೀಸರ ನಿರ್ಲಕ್ಷ್ಯತೆಗೆ ಬೇಸತ್ತಿರುವ ಕುಟುಂಬ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೋವಿನಿಂದ ಹೇಳುತ್ತಿದೆ.ಇನ್ನಾದರೂ ಈ ಕುಟುಂಬದ ನೆರವಿಗೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬರಬೇಕಿದೆ…