
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ…
- TV10 Kannada Exclusive
- October 18, 2022
- No Comment
- 162
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಮಹತ್ವದ ಆದೇಶ…ಇನ್ಮುಂದೆ 7 ದಿನಗಳಿಗೇ ಸಿಗಲಿದೆ ಪೌತಿ ಖಾತೆ…

ಬೆಂಗಳೂರು,ಅ18,Tv10 ಕನ್ನಡ
ರೈತರು ಮತ್ತು ಖಾತೆದಾರರಿಗೆ ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಸಿಹಿ ಸುದ್ದಿ ನೀಡಿದೆ.ಕ್ರಯ ಮತ್ತು ಪೌತಿ ಖಾತೆಗಾಗಿ ಇನ್ನುಮುಂದೆ 30 ದಿನಗಳ ಕಾಲ ಕಾಯುವಂತಿಲ್ಲ.7 ದಿನಗಳಿಗೇ ಪೌತಿ ಖಾತೆ ಮಾಡಿಕೊಡಬೇಕೆಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಹಿಂದೆ ರೈತರು ಹಾಗೂ ಖಾತೆದಾರರು ಪೌತಿ ಖಾತೆ ಪಡೆಯಲು ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ವರೆಗೆ ಕಾಯಬೇಕಿತ್ತು.ತಾಲೂಕು ಕಚೇರಿ ಹಾಗೂ ನಾಡ ಕಚೇರಿಗಳಿಗೆ ಅಲೆಯಬೇಕಿತ್ತು.ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನೀಗಿಸಲು ಸರ್ಕಾರ ಮಹತ್ತರ ನಿರ್ಧಾರ ಕೈಗೊಂಡಿದೆ.30 ದಿನಗಳ ಕಾಲಾವಕಾಶವನ್ನ 7 ದಿನಗಳಿಗೆ ಇಳಿಸಿದೆ.ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಬಲರಾಮ್ ರವರು ಅಧಿಸೂಚನೆಯನ್ನ ಹೊರಡಿಸಿದ್ದಾರೆ.ಅಕ್ಟೋಬರ್ 14 ರಂದು ಮಹತ್ತರ ಆದೇಶ ಜಾರಿಯಾಗಿದೆ…