- October 21, 2022
ರಸ್ತೆ ದಾಟುತ್ತಿದ್ದ ಹಸುವಿಗೆ ಢಿಕ್ಕಿ ಹೊಡೆದು ಆಯತಪ್ಪಿ ಸ್ಕೂಟರ್ ನಿಂದ ಬಿದ್ದ ಮಹಿಳೆ ಸಾವು…ಮಗನಿಗೆ ಗಾಯ…

ರಸ್ತೆ ದಾಟುತ್ತಿದ್ದ ಹಸುವಿಗೆ ಢಿಕ್ಕಿ ಹೊಡೆದು ಆಯತಪ್ಪಿ ಸ್ಕೂಟರ್ ನಿಂದ ಬಿದ್ದ ಮಹಿಳೆ ಸಾವು…ಮಗನಿಗೆ ಗಾಯ…
ಮೈಸೂರು,ಅ21,Tv10 ಕನ್ನಡ
ಹಸುವಿಗೆ ಢಿಕ್ಕಿ ಹೊಡೆದು ಆಯತಪ್ಪಿ ಸ್ಕೂಟರ್ ನಿಂದ ಬಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಮೈಸೂರು-ನಂಜನಗೂಡು ರಸ್ತೆಯ ಆರ್.ಎಂ.ಪಿ.ಬಳಿ ನಡೆದಿದೆ.ಕ್ಯಾತಮಾರನಹಳ್ಳಿಯ ಮಹದೇವಮ್ಮ(55) ಮೃತ ದುರ್ದೈವಿ. ಮಗನ ಜೊತೆ ಸ್ಕೂಟರ್ ನಲ್ಲಿ ನಂಜನಗೂಡಿನಿಂದ ಮೈಸೂರಿಗೆ ಹಿಂದಿರುಗುವಾಗ ದುರ್ಘಟನೆ ನಡೆದಿದೆ.ಮಗ ಚಿರಂತನ್ ಗೆ ಸಣ್ಣಪುಟ್ಟ ಗಾಯಗಳಾಗಿದೆ.ಹೆಲ್ಮೆಟ್ ಧರಿಸದ ಹಿನ್ನಲೆ ತಲೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಮಹದೇವಮ್ಮ ಮೃತಪಟ್ಟಿದ್ದಾರೆ.ನಂಜನಗೂಡು ದೇವಸ್ಥಾನಕ್ಕೆ ತೆರಳಿ ಮೈಸೂರಿಗೆ ತಾಯಿ ಮಗ ಹಿಂದಿರುಗುತ್ತಿದ್ದಾಗ ಆರ್.ಎಂ.ಪಿ ಬಳಿ ಹಸು ಅಡ್ಡ ಬಂದಿದೆ.ಢಿಕ್ಕಿ ಹೊಡೆಯುವುದನ್ನ ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.ಈ ವೇಳೆ ಹಿಂಬದಿ ಕುಳಿತಿದ್ದ ಮಹದೇವಮ್ಮ ಸ್ಕೂಟರ್ ನಿಂದ ಆಯತಪ್ಪಿ ಬಿದ್ದಿದ್ದಾರೆ.ತಲೆಗೆ ಗಂಭೀರ ಗಾಯವಾಗಿದೆ.ಕೆ.ಆರ್.ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಹದೇವಮ್ಮಮೃತಪಟ್ಟಿದ್ದಾರೆ.ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…