
ಮೈಸೂರು ವಾರ್ಡ ಸಂಖ್ಯೆ: 07 ಮೇಟಗಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ ಒಟ್ಟು ರೂ: 3.60 ಕೋಟಿ ಮೊತ್ತದ ರಸ್ತೆ ಅಭಿವೃದ್ದಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
- Mysore
- October 21, 2022
- No Comment
- 177
ಮೈಸೂರು ವಾರ್ಡ ಸಂಖ್ಯೆ: 07 ಮೇಟಗಳ್ಳಿ ಬಡಾವಣೆ ವ್ಯಾಪ್ತಿಯಲ್ಲಿ ಒಟ್ಟು ರೂ: 3.60 ಕೋಟಿ ಮೊತ್ತದ ರಸ್ತೆ ಅಭಿವೃದ್ದಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮೈಸೂರು ದಿನಾಂಕ: 21-10-2022 ರ ಶುಕ್ರವಾರದಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ವಾರ್ಡ ಸಂ:7 ರ ಮೇಟಗಳ್ಳಿ, ಬಿ.ಎಂ.ಶ್ರೀನಗರದ ರೈಲ್ವೆ ಗೇಟ್ 1ನೇ ಮುಖ್ಯರಸ್ತೆಯಿಂದ ಕರಕುಶಲನಗರದ ವರೆಗೆ ಹಾಗೂ ಮಾವಿನ ತೋಪಿನ ಅಡ್ಡ ರಸ್ತೆ ಅಭಿವೃದ್ದಿ & ಚರಂಡಿ ನಿರ್ಮಾಣ ಹಾಗೂ 1ನೇ ಮುಖ್ಯರಸ್ತೆ, 18ನೇ ಅಡ್ಡರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, ಕಾಮಗಾರಿಯ ವೆಚ್ಚ ರೂ. 3.10 ಕೋಟಿ ಹಾಗೂ ಬಿ.ಎಂ.ಶ್ರಿ ನಗರದ ನರ್ಮ್ ಕಾಂಪ್ಲೆಕ್ಸ್ ಸುತ್ತಲಿನ ಕಾಂಕ್ರೀಟ್ ರಸ್ತೆ & ಚರಂಡಿ ನಿರ್ಮಾಣ ಕಾಮಗಾರಿಯ ವೆಚ್ಚ ರೂ: 50.00ಲಕ್ಷಗಳ ಕಾಮಗಾರಿಗಳಿಗೆ*ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯಶಾಸಕರಾದ *ಶ್ರೀ ಎಲ್. ನಾಗೇಂದ್ರರವರು, ವಾರ್ಡ ನಂ-07 (ಮೇಟಗಳ್ಳಿ) ಮೈಸೂರು ಮಹಾನಗರಪಾಲಿಕೆ ಸದಸ್ಯರಾದ ಶ್ರೀ ರಮೇಶ್ ಹಾಗೂ ಮಾಜಿ ಮಹಾನಗರಪಾಲಿಕೆ ಸದಸ್ಯರಾದ ಶ್ರೀ ದೇವರಾಜ್ ರವರುಗಳ* ಉಪಸ್ಥಿತಿಯಲ್ಲಿ ಗುದ್ದಲಿಪೂಜೆಯನ್ನು ನೆರವೇರಿ ಗುದ್ದಲಿಪೂಜೆಯನ್ನು ನೆರವೇರಿಸಿದರು,
ಈ ಕಾರ್ಯಕ್ರಮದಲ್ಲಿ ಮಾಜಿ ನಗರಪಾಲಿಕೆ ಸದಸ್ಯ ದೇವರಾಜು, ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಪುನೀತ್, ವಾರ್ಡ್ ಅಧ್ಯಕ್ಷ ನರಸಿಂಹ ಮೂರ್ತಿ, ಕಾರ್ಯದರ್ಶಿ ರವೀಂದ್ರ, ಆರಾಧನಾ ಸಮಿತಿ ಸದಸ್ಯ ಪುಟ್ಟಬುದ್ದಿ, ಮುಖಂಡರುಗಳಾದ ರುಕ್ಮಿಣಿ, ನಾಗರತ್ನ, ಶೋಭ, ಸಾವಿತ್ರಿ ಮಧು, ರಮೇಶ್, ತಮ್ಮಣ್ಣ, ಗುಂಡ, ರವಿಕುಮಾರ್, ಚಂದ್ರಶೇಖರ್, ಮಂಜುನಾಥ, ಶಿವು, ದಾಸು, ಕರಿಯಪ್ಪ, ಶಂಕರ, ನವೀನ್ ವಕೀಲರು, ಪಾಪಣ್ಣ, ರಾಮಲಿಂಗು, ಜಯರಾಮಣ್ಣ, ರಾಜಪ್ಪ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರಾಜು, ಬಾಲಾಜಿ, ಗುತ್ತಿಗೆದಾರರಾದ ಶ್ರೀ ಅಶೋಕ್ ಗೋವಿಂದೇಗೌಡ ಮುಂತಾದವರು.