
ಮಾತು ತಪ್ಪಿದ ರಾಮಕೃಷ್ಣ ಆಶ್ರಮ…ಎಂ.ಟಿ.ಎಂ.ಶಾಲೆ ಉಳಿಸಿ ಒಕ್ಕೂಟದಿಂದ ಪ್ರತಿಭಟನೆ…
- TV10 Kannada Exclusive
- October 25, 2022
- No Comment
- 140
ಮಾತು ತಪ್ಪಿದ ರಾಮಕೃಷ್ಣ ಆಶ್ರಮ…ಎಂ.ಟಿ.ಎಂ.ಶಾಲೆ ಉಳಿಸಿ ಒಕ್ಕೂಟದಿಂದ ಪ್ರತಿಭಟನೆ…
ಮೈಸೂರು,ಅ25,Tv10 ಕನ್ನಡ
ಮಹಾರಾಣಿ ಎಂ.ಟಿ.ಎಂ.ಶಾಲೆ ನಿರ್ಮಾಣ ವಿಚಾರದಲ್ಲಿ ಮತ್ತೆ ಗೊಂದಲ ಶುರುವಾಗಿದೆ.ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಕೊಟ್ಟ ಮಾತು ತಪ್ಪಿದೆ ಎಂದು ಆರೋಪಿಸಿ ಎಂ.ಟಿ.ಎಂ.ಶಾಲೆ ಉಳಿಸಿ ಹೋರಾಟ ಒಕ್ಕೂಟದ ವತಿಯಿಂದ ಇಂದು ಇನ್ಸ್ಟ್ಯೂಟ್ ಆಫ್ ಇಂಜಿನಿಯರಿಂಗ್ ಮುಂಭಾಗ ಪ್ರತಿಭಟನೆ ನಡೆದಿದೆ.ಸ್ಮಾರಕ ನಿರ್ಮಾಣ ವೇಳೆ ಶಾಲೆ ನಿರ್ಮಾಣಕ್ಕೂ ಆಧ್ಯತೆ ನೀಡುವುದಾಗಿ ಭರವಸೆ ನೀಡಿದ್ದ ಆಡಳಿತ ಮಂಡಳಿ ಮಾತು ತಪ್ಪಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಮೇಯರ್ ಪುರುಶೋತ್ತಮ್ ನೇತೃತ್ವದಲ್ಲಿ ಒಕ್ಕೂಟದ ಸಂಚಾಲಕರಾದ ಮೋಹನ್ ಕುಮಾರ್ ಗೌಡ,ರೈತ ಮುಖಂಡ ಹೊಸಕೋಟೆ ಬಸವರಾಜ್ ಸೇರಿದಂತೆ ಇನ್ನಿತರರು ಪ್ರತಿಭಟನೆ ನಡೆಸಿದ್ದಾರೆ..