
ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ…23 ಲಕ್ಷ ಮೌಲ್ಯದ 46 ಕೆ.ಜಿ.ಗಾಂಜಾ ವಶ…ನಾಲ್ವರ ಬಂಧನ…
- CrimeMysore
- October 24, 2022
- No Comment
- 165
ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ…23 ಲಕ್ಷ ಮೌಲ್ಯದ 46 ಕೆ.ಜಿ.ಗಾಂಜಾ ವಶ…ನಾಲ್ವರ ಬಂಧನ…
ಮೈಸೂರು,ಅ24,Tv10 ಕನ್ನಡ
ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನ ಬಂಧಿಸಿ 23 ಲಕ್ಷ ಮೌಲ್ಯದ 46 ಕೆ.ಜಿ.691 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಎರಡು ದಿನಗಳ ಅಂತರದಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮರನ್ನ ಸೆರೆ ಹಿಡಿದಿದ್ದಾರೆ.ಮೊದಲನೇ ಪ್ರಕರಣದಲ್ಲಿ ಮೂವರು ಖದೀಮರನ್ನ ಬಂಧಿಸಿ 5 ಕೆ.ಜಿ.691 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಓರ್ವ ಆರೋಪಿಯನ್ನ ಬಂಧಿಸಿ 41 ಕೆ.ಜಿ.ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಮಾದಕ ವಸ್ತುಗಳ ವಿರುದ್ದ ಸಮರ ಸಾರಿರುವ ಸಿಸಿಬಿ ಪೊಲೀಸರು ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದರು.ಇದೀಗ ಕೇವಲ ಎರಡು ಪ್ರಕರಣಗಳಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆ ಮಾಡಿ ಆರೋಪಿಗಳನ್ನ ಸೆರೆಮನೆಗೆ ಅಟ್ಟಿದ್ದಾರೆ.
ಡಿಸಿಪಿ ಗೀತಾ ಎಂ.ಎಸ್.ರವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಅಶ್ವತ್ಥ್ ನಾರಾಯಣ್ ಉಸ್ತುವಾರಿಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮಲ್ಲೇಶ್ ಹಾಗೂ ಎಎಸ್ಸೈ ರಾಜು ನೇತೃತ್ವದಲ್ಲಿ ಸಿಬ್ಬಂದಿಗಳಾದ ಅನಿಲ್ ಸುಬಾನಲ್ಲಾ ಬಾಲದಾರ್,ಶ್ರೀನಿವಾಸ್ ಪ್ರಸಾದ್,ಜೋಸೆಫ್ ನರಾನ್ಹಾ,ರವಿಕುಮಾರ್,ರಾಧೇಶ್,ಜನಾರ್ಧನರಾವ್,ಶ್ರೀನಿವಾಸ್,ಅರುಣ್ ಕುಮಾರ್,ರಘು ಹಾಗೂ ಮಮತ ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ…