ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ತ್ರಿಪುರ ಭೈರವಿ ಮಠದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ… ವೀರಸಾವರ್ಕರ್ ಯುವ ಬಳಗದಿಂದ ಆಚರಣೆ…

ಮೈಸೂರು,ಅ25,Tv10 ಕನ್ನಡ
ಡಿ.ದೇವರಾಜ ಅರಸು ರಸ್ತೆಯ ತ್ರಿಪುರಭೈರವಿ ಮಠದ ಆವರಣದಲ್ಲಿ ವೀರಸಾವರ್ಕರ್ ಯುವ ಬಳಗದ ವತಿಯಿಂದ ಅಖಂಡ ಭಾರತಕ್ಕೆ ಒಂದು ದೀಪ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಯನ್ಮಾರ್, ಥಾಯ್ಲಾಂಡ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷಿಯಾ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ಅನೇಕ ದೇಶಗಳಲ್ಲಿ ಹಿಂದೂಸ್ಥಾನದ ಸಂಸ್ಕೃತಿಯು ನೆಲೆಸಿತ್ತು.ಕಾಲಾಂತರದಲ್ಲಿ ಬದಲಾವಣೆಗಳಾಗಿ ವಿವಿಧ ದೇಶಗಳಾಗಿ ಗಡಿ ಹಾಕಿಕೊಂಡಿವೆ. ಎಲ್ಲವನ್ನೂ ಮತ್ತೆ ಒಟ್ಟುಗೂಡಿಸಿ ಅಖಂಡ ಭಾರತವನ್ನಾಗಿಸುವ ಸಂಕಲ್ಪಕ್ಕಾಗಿ ದೀಪಾವಳಿಯಂದು ಅಖಂಡ ಭಾರತಕ್ಕಾಗಿ ಒಂದು ದೀಪ ಎಂಬ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಅಖಂಡ ಭಾರತದ ಭೂಪಟದ ಮುಂದೆ ಹಣತೆಯನ್ನು ಹಚ್ಚಿ ಆರತಿ ಮಾಡಲಾಯಿತು. ಭಾರತ ಮಾತೆಗೆ ಜಯಘೋಷ ಕೂಗಿ ಅಖಂಡ ಭಾರತಕ್ಕಾಗಿ ಸಂಕಲ್ಪಿಸಲಾಯಿತು.
ನಂತರ ಮಾತನಾಡಿದ ಬಳಗದ ಅಧ್ಯಕ್ಷ ರಾಕೇಶ್ ಭಟ್ “ಹಿಂದೂಸ್ತಾನದ ಸುತ್ತಮುತ್ತಲಿನ ದೇಶಗಳಲ್ಲಿ ಭಾರತೀಯ ಹೆಸರುಗಳು, ಸಂಸ್ಕೃತಿ ಜೀವಂತವಾಗಿರುವುದನ್ನು ಈಗಲೂ ಕಾಣಬಹುದು.ಇತ್ತೀಚಿನ ದಿನಗಳಲ್ಲಿ ಹಿಂದುತ್ವ ಎಂದರೆ ಕೋಮುವಾದ, ಮೂಲಭೂತವಾದ ಮತ್ತು ಬ್ರಾಹ್ಮಣವಾದ ಎಂಬ ಸುಳ್ಳನ್ನು ಜನರ ಮನಸ್ಸಿನಲ್ಲಿ ತುಂಬಲು ಯತ್ನಿಸಲಾಗುತ್ತಿದೆ. ಆದರೆ ಸಾವರ್ಕರ್ ಅವರು ಯಾರೆಲ್ಲಾ ಭಾರತೀಯ ನೆಲದ ಸಂಸ್ಕೃತಿಯನ್ನು ಒಪ್ಪಿ ಅನುಸರಿಸಿ ಬದುಕುತ್ತಿದ್ದಾರೋ ಅವರೆಲ್ಲರೂ ಹಿಂದೂಗಳು ಎಂಬುದನ್ನು ಪ್ರತಿಪಾದಿಸಿದ್ದರು. ಸರ್ವೋಚ್ಚ ನ್ಯಾಯಾಲಯವು ಸಹ ಹಿಂದೂ ಎಂದರೆ ಬದುಕುವ ವಿಧಾನ ಎಂಬುದಾಗಿ ತಿಳಿಸಿದೆ. ಈ ಸಿದ್ಧಾಂತದ ಅಡಿಯಲ್ಲಿ ಸರ್ವ ಧರ್ಮಗಳು, ಮತಗಳು, ಜಾತಿಗಳು ಸಹಿಷ್ಣುತೆಯಿಂದ ಪರಸ್ಪರರ ಸಂಸ್ಕೃತಿಯನ್ನು ಗೌರವಿಸುತ್ತಾ ಬದುಕುವುದೇ ಆಗಿದೆ. ಹಾಗಾಗಿ ಅಖಂಡ ಭಾರತದ ನಿರ್ಮಾಣದಿಂದ ಪ್ರಪಂಚದಲ್ಲಿಯೇ ಭಾರತೀಯ ಸಂಸ್ಕೃತಿ ಮೇಳೈಸಲಿದೆ” ಎಂದರು. ಸಂದೇಶ್ ಪವಾರ್, ಟಿ.ಎಸ್. ಅರುಣ್, ಸುರೇಂದ್ರ, ಬಿ.ಸಿ.ಶಶಿಕಾಂತ್, ಅಂಬಾರಿ ಪ್ರಹ್ಲಾದರಾವ್, ಅನೂಜ್ ಸಾರಸ್ವತ್, ಶ್ರೀನಿವಾಸಪ್ರಸಾದ್, ಸುಚೇಂದ್ರ, ಉಮೇಶ್, ಸಂತೋಷ್, ಕುಮಾರ್, ಮುರಳಿ ಭಾಗವಹಿಸಿದ್ದರು…

Spread the love

Related post

ರಿಯಲ್ ಎಸ್ಟೇಟ್ ವ್ಯವಹಾರ…ನಿವೃತ್ತ ಡಿವೈಎಸ್ಪಿ ಸೇರಿದಂತೆ ನಾಲ್ವರ ವಿರುದ್ದ ದೂರು…

ರಿಯಲ್ ಎಸ್ಟೇಟ್ ವ್ಯವಹಾರ…ನಿವೃತ್ತ ಡಿವೈಎಸ್ಪಿ ಸೇರಿದಂತೆ ನಾಲ್ವರ ವಿರುದ್ದ ದೂರು…

ಮೈಸೂರು,ಅ4,Tv10 ಕನ್ನಡ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಭಂಧಿಸಿದಂತೆ ಮೈಸೂರಿನಲ್ಲಿ ನಿವೃತ್ತ ಡಿವೈಎಸ್‌ಪಿ ಸೇರಿ ನಾಲ್ವರ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿವೃತ್ತ ಡಿವೈಎಸ್‌ಪಿ ವಿಜಯಕುಮಾರ್ ಹಾಗೂ…
ನೇಣುಬಿಗಿದು ಗೃಹಿಣಿ ಆತ್ಮಹತ್ಯೆ…ಗಂಡನ ಮನೆಯವರ ಕಿರುಕುಳ ಆರೋಪ…

ನೇಣುಬಿಗಿದು ಗೃಹಿಣಿ ಆತ್ಮಹತ್ಯೆ…ಗಂಡನ ಮನೆಯವರ ಕಿರುಕುಳ ಆರೋಪ…

ಮೈಸೂರು,ಅ3,Tv10 ಕನ್ನಡ ಗೃಹಿಣಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕೆ.ಆರ್.ಮೊಹಲ್ಲಾದ ವೀಣೇಶೇಷಣ್ಣ ರಸ್ತೆಯಲ್ಲಿ ನಡೆದಿದೆ.ಸ್ಪೂರ್ತಿ (31) ಆತ್ಮಹತ್ಯೆಗೆ ಶರಣಾದ ಗೃಹಿಣಿ.ಪತಿ ಶ್ರೀಕಂಠ ಹಾಗೂ ಆತನ…
ಹುಣಸೂರು:ಹುಲಿದಾಳಿ…ರೈತ ಬಲಿ…

ಹುಣಸೂರು:ಹುಲಿದಾಳಿ…ರೈತ ಬಲಿ…

ಹುಣಸೂರು,ಅ2,Tv10 ಕನ್ನಡ ಹುಲಿ ದಾಳಿಗೆ ರೈತ ಬಲಿಯಾದ ಘಟನೆ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಗಣೇಶ (55)ಹುಲಿ ದಾಳಿಗೆ ಬಲಿಯಾದ ರೈತ.ದನ ಮೇಯಿಸುವಾಗ ಹುಲಿ ದಾಳಿ ಮಾಡಿದೆ.ಹುಲಿ…

Leave a Reply

Your email address will not be published. Required fields are marked *