ಸಾವಿನಲ್ಲೂ ಸಾರ್ಥಕತೆ ಮೆರೆದ ಮೊಗಣ್ಣೇಗೌಡ…ಅಂಗಾಂಗ ದಾನದಿಂದ 5 ಮಂದಿಗೆ ಹೊಸ ಜೀವನ…
- TV10 Kannada Exclusive
- October 27, 2022
- No Comment
- 320
ಸಾವಿನಲ್ಲೂ ಸಾರ್ಥಕತೆ ಮೆರೆದ ಮೊಗಣ್ಣೇಗೌಡ…ಅಂಗಾಂಗ ದಾನದಿಂದ 5 ಮಂದಿಗೆ ಹೊಸ ಜೀವನ…
ಮೈಸೂರು,ಅ27,Tv10 ಕನ್ನಡ
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದ ಮೊಗಣ್ಣೇಗೌಡ(67) ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಅಂಗಾಂಗ ದಾನ ಮಾಡುವ ಮೂಲಕ 5 ಮಂದಿಗೆ ಹೊಸ ಜೀವನ ನೀಡಿದ್ದಾರೆ.ಮೆದುಳಿನ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮೊಗಣ್ಣೇಗೌಡ ರನ್ನ ಅಕ್ಟೋಬರ್ 23 ರಂದು ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೆದುಳು ನಿಷ್ಕ್ರಯವಾಗುವುದನ್ನ ಖಚಿತ ಪಡಿಸಿಕೊಂಡ ವೈದ್ಯರು ಮೊಗಣ್ಣೇಗೌಡ ರವರ ಕುಟುಂಬಸ್ಥರಿಗೆ ಪರಿಸ್ಥಿತಿಯನ್ನ ವಿವರಿಸಿದ್ದರು.ಮೊಗಣ್ಣೇಗೌಡರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದರು.ಅಕ್ಟೋಬರ್ 26 ರಂದು ಮೊಗಣ್ಣೇಗೌಡ ನಿಧನಹೊಂದಿದರು.ಮೊಗಣ್ಣೇಗೌಡರ ಎರಡು ಕಾರ್ನಿಯ(ಕಣ್ಣುಗಳು,ಎರಡು ಕಿಡ್ನಿ ಹಾಗೂ ಲಿವರ್ ಗಳನ್ನ ಪಡೆದ ವೈದ್ಯರ ತಂಡ ಜೆ.ಎಸ್.ಎಸ್.ಆಸ್ಪತ್ರೆಯ ರೋಗಿಯೊಬ್ಬರಿಗೆ ಒಂದು ಕಿಡ್ನಿ ಹಾಗೂ 2 ಕಾರ್ನಿಯಾಗಳನ್ನ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಉಳಿದ ಕಿಡ್ನಿ ಹಾಗೂ ಲಿವರ್ ಅನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ರವಾನಿಸಿದ್ದಾರೆ.ಮೊಗಣ್ಣೇಗೌಡರ ಅಂಗಾಂಗ ದಾನದಿಂದ 5 ಮಂದಿಗೆ ಹೊಸ ಜೀವನ ನೀಡಿದಂತಾಗಿದೆ..