ಆಪರೇಷನ್ ಥಿಯೇಟರ್ ಗೆ ಹೋಗಬೇಕಿದ್ದ ಮಹಿಳೆ ಮಸಣಕ್ಕೆ…ಶಸ್ತ್ರಚಿಕಿತ್ಸೆಗೆ ಹೆದರಿ ನೇಣಿಗೆ ಶರಣು…
- MysoreTV10 Kannada Exclusive
- October 29, 2022
- No Comment
- 99
ಆಪರೇಷನ್ ಥಿಯೇಟರ್ ಗೆ ಹೋಗಬೇಕಿದ್ದ ಮಹಿಳೆ ಮಸಣಕ್ಕೆ…ಶಸ್ತ್ರಚಿಕಿತ್ಸೆಗೆ ಹೆದರಿ ನೇಣಿಗೆ ಶರಣು…
ಮೈಸೂರು,ಅ29,Tv10 ಕನ್ನಡ
ಸೊಂಟದ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಪರೇಷನ್ ಗೆ ಹೆದರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ನಾಯ್ಡುನಗರದಲ್ಲಿ ನಡೆದಿದೆ.ಕವಿತಾ(45) ಮೃತ ದುರ್ದೈವಿ.ಕೋವಿಡ್ ಎರಡನೇ ಅಲೆಯಲ್ಲಿ ಪತಿ ಶಿವಲಿಂಗೇಗೌಡರನ್ನ ಕಳೆದುಕೊಂಡಿದ್ದ ಕವಿತಾ ಪುತ್ರ ವಿಶಾಲ್ ಜೊತೆ ಇದ್ದರು.ಕಬ್ಬಿಣದ ಅಂಗಡಿ ನಡೆಸುತ್ತಿದ್ದ ವಿಶಾಲ್ ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು.ಕುಟುಂಬ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು.ಇಂದು ಸೊಂಟ ನೋವಿಗೆ ಕವಿತಾ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು.ಆಪರೇಷನ್ ಗೆ ಹೆದರಿದ ಕವಿತಾ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…