
MMC ಸಂಸ್ಕೃತಿ ವತಿಯಿಂದ ಸೈಕ್ಲೋಥಾನ್…100 ಕ್ಕೂ ಅಧಿಕ ಸೈಕ್ಲಿಸ್ಟ್ ಗಳು ಭಾಗಿ…
- Mysore
- October 29, 2022
- No Comment
- 168
MMC ಸಂಸ್ಕೃತಿ ವತಿಯಿಂದ ಸೈಕ್ಲೋಥಾನ್…100 ಕ್ಕೂ ಅಧಿಕ ಸೈಕ್ಲಿಸ್ಟ್ ಗಳು ಭಾಗಿ…

Pಮೈಸೂರು,ಅ29_Tv10 ಕನ್ನಡ
ಮೈಸೂರು ಮೆಡಿಕಲ್ ಕಾಲೇಜಿನ ಸಂಸ್ಕೃತಿ ವತಿಯಿಂದ ಇಂದು ಸೈಕ್ಲೋಥಾನ್ ಆಯೋಜಿಸಲಾಗಿತ್ತು.ನೂರಕ್ಕೂ ಹೆಚ್ಚು ಸೈಕ್ಲಿಸ್ಟ್ ಗಳು ಸೈಕ್ಲೋಥಾನ್ ನಲ್ಲಿ ಭಾಗಿಯಾಗಿದ್ದರು.ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸೈಕ್ಲೋಥಾನ್ ಗೆ ಚಾಲನೆ ನೀಡಲಾಯಿತು.MMC ಯ ಸ್ಟೂಡೆಂಟ್ಸ್ ವೆಲ್ ಫೇರ್ ಆಫೀಸರ್ ಪ್ರೊ.ಚಂದ್ರಶೇಖರ್ ಸೂಕ್ಲೋಥಾನ್ ಗೆ ಚಾಲನೆ ನೀಡಿದರು.23 ಕಿ.ಮೀ ದೂರವನ್ನ ಸೈಕ್ಲಿಸ್ಟ್ ಗಳು ಉತ್ಸಾಹದಿಂದ ಕ್ರಮಿಸಿದರು.ಶಾರದ ಸೈಕಲ್ ಅಂಡ್ ವಾಚ್ ಸ್ಟೋರ್ಸ್ ವತಿಯಿಂದ ವಿಜೇತರಿಗೆ ಬಹುಮಾನ ಪ್ರಾಯೋಜಕತ್ವ ನಿಗದಿ ಪಡಿಸಲಾಗಿತ್ತು. ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ ದಾಕ್ಷಾಯಿಣಿ ರವರು ವಿಜೇತರಿಗೆ ಬಹುಮಾನ ವಿತರಿಸಿದರು.ಮೊದಲ ಬಹುಮಾನ ರುಚಿರ್,ದ್ವಿತೀಯ ಬಹುಮಾನ ಧನಂಜಯ್,ತೃತೀಯ ಬಹುಮಾನ ಚಿರಾಗ್,ನಾಲ್ಕನೇ ಬಹುಮಾನ ಓಂಕುಮಾರ್ ಹಾಗೂ 5 ನೇ ಬಹುಮಾನ ನಿಖಿಲ್ ಶೆಟ್ಟಿ ಪಡೆದರು.ಮೊದಲ ಎರಡು ವಿಜೇತರಿಗೆ ವೆಕ್ಟಾರ್ 91 ಸೈಕಲ್ ಗಳನ್ನ ಬಹುಮಾನವಾಗಿ ನೀಡಲಾಯಿತು…