ಪ್ರಿಯಕರನೊಂದಿಗೆ ಮದುವೆ…ಪತಿ ನೇಣಿಗೆ…ಹುಣಸೂರಿನಲ್ಲಿ ಘಟನೆ…
- TV10 Kannada Exclusive
- October 31, 2022
- No Comment
- 151
ಪ್ರಿಯಕರನೊಂದಿಗೆ ಮದುವೆ…ಪತಿ ನೇಣಿಗೆ…ಹುಣಸೂರಿನಲ್ಲಿ ಘಟನೆ…
ಹುಣಸೂರು,ಅ31,Tv10 ಕನ್ನಡ
ಪ್ರಿಯಕರನೊಂದಿಗೆ ಪತ್ನಿ ವಿವಾಹವಾದ ಹಿನ್ನಲೆ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ಹುಣಸೂರಿನ ಕೊಯಮತ್ತೂರು ಕಾಲೋನಿಯಲ್ಲಿ ನಡೆದಿದೆ.ಸುರೇಶ್ ಕುಮಾರ್(37) ಮೃತ ದುರ್ದೈವಿ.7 ವರ್ಷದ ಹಿಂದೆ ನೇತ್ರಾ ಜೊತೆ ವಿವಾಹವಾಗಿದ್ದ ಸುರೇಶ್ ಕುಮಾರ್ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅನ್ಯೋನ್ಯ ಸಂಸಾರ ತೂಗಿಸುತ್ತಿದ್ದ.ಮಾರಿಷಸ್ ಸ್ಪಿನ್ನಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು.ಹುಣಸೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು.ತನಿಖೆ ನಡೆಸಿದ ಹುಣಸೂರು ಪೊಲೀಸರಿಗೆ ನೇತ್ರಾ ಶಿವಮೊಗ್ಗದಲ್ಲಿ ಪತ್ತೆಯಾದಳು.ವಿಚಾರಣೆ ನಡೆಸಿದಾಗ ಪತಿಯ ಜೊತೆ ಹೊಂದಾಣಿಕೆ ಆಗಿಲ್ಲವೆಂದು ತಿಳಿಸಿದ್ದಳು.ಜೊತೆಗೆ ಗಂಡನ ಮೊಬೈಲ್ ಗೆ ತಾನು ಮತ್ತೊಂದು ಮದುವೆ ಆಗಿರುವುದಾಗಿ ಮಾಹಿತಿ ನೀಡಿ ಫೋಟೋ ಹಾಗೂ ವಿಡಿಯೋ ಗಳನ್ನ ಗಂಡನ ಮೊಬೈಲ್ ಗೆ ರವಾನಿಸಿದ್ದಳು.ಇದರಿಂದಾಗಿ ಮನನೊಂದ ಸುರೇಶ್ ಕುಮಾರ್ ನೇಣಿಗೆ ಶರಣಾಗಿದ್ದಾರೆ.ಇಬ್ಬರು ಮಕ್ಕಳು ಇದೀಗ ತಾತನ ಮನೆ ಆಶ್ರಯ ಪಡೆದಿದ್ದಾರೆ.ಮಗನ ಸಾವಿಗೆ ಸೊಸೆ ಕಾರಣ ಆಕೆಯ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಸುರೇಶ್ ಕುಮಾರ್ ತಂದೆ ಕೃಷ್ಣೇಗೌಡ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ…