
ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ…ಸಚಿವ ಎಸ್.ಡಿ.ಎಸ್.ರಿಂದ ದ್ವಜಾರೋಹಣೆ…
- TV10 Kannada Exclusive
- November 1, 2022
- No Comment
- 142
ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ…ಸಚಿವ ಎಸ್.ಡಿ.ಎಸ್.ರಿಂದ ದ್ವಜಾರೋಹಣೆ…
ಮೈಸೂರು,ನ1,Tv10 ಕನ್ನಡ :
ಸಾಂಸ್ಕೃತಿಕ ನಗರಿಯಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.ಮೈಸೂರು ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ರಿಂದ ಧ್ವಜಾರೋಹಣ ನೆರವೇರಿದರು.
ಅರಮನೆಯ ಬಲರಾಮದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರ ಧ್ವಜಾರೋಹಣ ನೆರವೇರುತ್ತಿದ್ದಂತೆ ರಾಷ್ಟ್ರಗೀತೆ ನುಡಿಸಲಾಯಿತು.
ನಂತರ ನಾಡ ಧ್ವಜಾರೋಹಣ ನೆರವೇರಿಸಲಾಯಿತು.
ನಾಡಧ್ವಜಾರೋಹಣ ನೆರವೇರುತ್ತಿದ್ದಂತೆ ನಾಡಗೀತೆ ಹಾಡಲಾಯಿತು.
ನಂತರ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಸಚಿವ ಎಸ್ ಟಿ ಸೋಮಶೇಖರ್.
ಬಳಿಕ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಸಚಿವ ಎಸ್ ಟಿ ಸೋಮಶೇಖರ್ ರವರು ಗೌರವ ವಂದನೆ ಸ್ವೀಕರಿಸಿದರು…