
ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…
- TV10 Kannada Exclusive
- November 4, 2022
- No Comment
- 173

ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…
ಮೈಸೂರು,ನ4,Tv10 ಕನ್ನಡ
ದಸರಾ ವಸ್ತುಪ್ರದರ್ಶನ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ.ವಾಹನ ಸವಾರರಿಂದ ನಿಗದಿತ ಶುಲ್ಕಕ್ಕೂ ಹೆಚ್ಚು ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ.ವಸ್ತುಪ್ರದರ್ಶನದ ಅಧಿಕಾರಿಗಳ ಗಮನಕ್ಕೆ ಈ ಮಾಹಿತಿ ತಲುಪಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ.
ಸ್ಕೂಟರ್ ಹಾಗೂ ಆಟೋ ಗೆ 10 ರೂ,ಕಾರ್ ಗೆ 20 ರೂ,ಮೆಟಾಡರ್ ವ್ಯಾನ್ ಗೆ 30 ರೂ ಬಸ್ ಗೆ 50 ರೂ ನಿಗದಿ ಮಾಡಲಾಗಿದೆ.ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಿದ್ದಲ್ಲಿ ಪ್ರತಿ ದೂರಿಗೆ 500 ರೂ ನಂತೆ ದಂಡ ವಿಧಿಸಲಾಗುವುದೆಂದು ಗುತ್ತಿಗೆದಾರರಿಗೆ ಕಂಡೀಷನ್ ಹಾಕಲಾಗಿದೆ.ಹಾಗೂ ನಿಗದಿತ ಶುಲ್ಕಗಳನ್ನ ನಾಮಫಲಕ ಮೂಲಕ ಮಾಹಿತಿ ನೀಡುವಂತೆ ಟೆಂಡರ್ ನೀಡುವ ವೇಳೆ ಸೂಚನೆ ನೀಡಲಾಗಿದೆ.ಹೀಗಿದ್ದೂ ಸ್ಕೂಟರ್ ಗೆ 20 ರೂ,ಕಾರ್ ಗೆ 50 ರೂ ವಸೂಲಿ ಮಾಡಲಾಗುತ್ತಿದೆ.ಈ ಬಗ್ಗೆ ಕೆಲವು ಸಂಘಟಕರು ದೂರು ನೀಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.ಇನ್ನಾದರೂ ಈ ಹಗಲು ದರೋಡೆಗೆ ಬ್ರೇಕ್ ಹಾಕುವರೇ…?