ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ…
- TV10 Kannada Exclusive
- November 4, 2022
- No Comment
- 112
ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ…
ಮೈಸೂರು,ನ4,Tv10 ಕನ್ನಡ
ಕಬ್ಬಿನ ಬೆಲೆ ನಿಗದಿಗಾಗಿ ರೈತರು ಇಂದು ವಿನೂತನ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಐದನೇ ದಿನಕ್ಕೆ ಮುಂದುವರಿದ ಧರಣಿಯಲ್ಲಿ ಆದುವಾದಿ ವೇಷ ಧರಿಸಿ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.ನಾವು ಕಾಡು ಮನುಷ್ಯರಲ್ಲ ಎಂಬ ಸಂದೇಶ ರವಾನಿಸಿದರು.ಕಬ್ಬಿನ ಎಫ್ ಆರ್ ಪಿ ಪುನರ್ ಪರಿಶೀಲನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ಜಿಲ್ಕಾಧಿಕಾರಿಗಳ ಕಚೇರಿ ಮುಂದೆ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿದ್ದಾರೆ.ರೈತರ ಮನವಿಗೆ ಸ್ಪಂದಿಸದ ಹಿನ್ನಲೆ ಕಾಡು ಜನರ ವೇಷ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆ ಹಿಡಿದರು. ಟನ್ ಕಬ್ಬಿಗೆ ಎಫ್ ಆರ್ ಪಿ ದರ 3050 ಕ್ಕೆ ನಿಗದಿಗೊಳಿಸಲಾಗಿದೆ ಆದರೆ ಇತರೆ ರಾಜ್ಯಗಳು 3500 ರಿಂದ 3800ಕ್ಕೂ ಹೆಚ್ಚು ದರ ನೀಡುತ್ತಿರುವಾಗ ರಾಜ್ಯ ಸರ್ಕಾರ ಮಾತ್ರ ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್,ಜಿಲ್ಲಾಧ್ಯಕ್ಷ ಪಿ ಸೋಮಶೇಖರ್,ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್,ಸಂಚಾಲಕ ಕೆ ಆರ್ ಎಸ್ ರಾಮೇಗೌಡ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಡಿ ಕಾಟೂರು ಮಹದೇವಸ್ವಾಮಿ, ಚುಂಚುರಾಯನಹುಂಡಿ ಮಂಜು, ನಂಜುಂಡಸ್ವಾಮಿ, ಸಿದ್ದರಾಮ, ಬಸವರಾಜಪ್ಪ, ವರಕೂಡು ನಾಗೇಶ್, ತೆರಣಿಮುಂಟಿ ಸುರೇಶ್ ಶೆಟ್ಟಿ, ಸಾತಗಳ್ಳಿ ಬಸವರಾಜ್, ಪಿ ರಾಜು, ವಾಜಮಂಗಲ ಮಹದೇವು, ಸಾಕಮ್ಮ ಮಹಾ ಲಿಂಗನಾಯಕ ಸ್ವಾಮಿ,ರಾಜು, ಮಹಾದೇವಪ್ಪ ಹೊಸವಳಲು ರಮೇಶ್, ಬೈರೇಗೌಡ, ಷಡಕ್ಷರಿ. ಹೆಗ್ಗೂರು ರಂಗರಾಜು, ಶಿವರಾಮು, ಸಿ ಜವರಪ್ಪ, ನಾಗರಾಜು, ಇನ್ನು ಮುಂತಾದವರು ಇದ್ದರು..