
ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು…
- TV10 Kannada Exclusive
- November 6, 2022
- No Comment
- 167

ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು…

ಮೈಸೂರು,ನ6,Tv10 ಕನ್ನಡ
ಗುಂಡಿಗಳಿಂದ ರಸ್ತೆ ಅಪಘಾತಗಳನ್ನ ಕಣ್ಣಾರೆ ಕಂಡ ಸಾರ್ವಜನಿಕರು ಸ್ವಂತ ಖರ್ಚಿನಲ್ಲಿ ಹಳ್ಳಗಳನ್ನ ಮುಚ್ಚಿದ್ದಾರೆ.ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಬಳಿ ಇಂತಹ ಬೆಳವಣಿಗೆ ನಡೆದಿದೆ.ಅಕ್ಕಪಕ್ಕದಲ್ಲಿದ್ದ ಮಳಿಗೆ ಮಾಲೀಕರು,ಆಟೋ ಚಾಲಕರು,ಸಾರ್ವಜನಿಕರು ಸೇರಿ ಹಣ ಸಂಗ್ರಹಿಸಿ ಮರಳು,ಜೆಲ್ಲಿ ತಂದು ಗುಂಡಿಗಳನ್ನ ಮುಚ್ಚುವ ಮೂಲಕ ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.ಹಳ್ಳಗಳಿಂದ ತುಂಬಿದ ರಸ್ತೆಯಿಂದಾಗಿ ಆಗಾಗ ಈ ಸ್ಥಳದಲ್ಲಿ ಅಪಘಾತಗಳಾಗುತ್ತಿವೆ.ಸಾವು ನೋವುಗಳು ಸಂಭವಿಸುತ್ತಿವೆ.ರಸ್ತೆ ದುರಸ್ಥಿಗಾಗಿ ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೊರೆ ಹೋಗಿದ್ದಾರೆ.ಆದ್ರೆ ಜಡ್ಡು ಹಿಡಿದ ಇವರಿಗೆ ಜ್ಞಾನೋದಯವೇ ಆಗಿಲ್ಲ.ಪರ್ಯಾಯ ವ್ಯವಸ್ಥೆ ಕಂಡುಕೊಂಡ ಸ್ಥಳೀಯರು ತಮ್ಮದೇ ಖರ್ಚಿನಲ್ಲಿ ರಸ್ತೆಗೆ ತಾತ್ಕಾಲಿಕ ಕಾಯಕಲ್ಪ ಒದಗಿಸಿದ್ದಾರೆ.ಸ್ಥಳೀಯರ ಈ ಸಾಮಾಜಿಕ ಕಳಕಳಿ ಜನಪ್ರತಿನಿಧಿಗಳ ಕಣ್ಣು ತೆರೆಸುವುದೇ…?