
ಅತ್ಯಾಚಾರ ಆರೋಪ…ಶ್ರೀಲಂಕಾ ಕ್ರಿಕೆಟರ್ ಅಂದರ್…ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿ ಧನುಶ್ಕಾ ಗುಣತಿಲಕ…
- Crime
- November 6, 2022
- No Comment
- 154
ಅತ್ಯಾಚಾರ ಆರೋಪ…ಶ್ರೀಲಂಕಾ ಕ್ರಿಕೆಟರ್ ಅಂದರ್…ಆಸ್ಟ್ರೇಲಿಯಾ ಪೊಲೀಸರ ವಶದಲ್ಲಿ ಧನುಶ್ಕಾ ಗುಣತಿಲಕ…
Tv10 ಕನ್ನಡ
ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಸ್ಟ್ರೇಲಿಯಾ ಪೊಲೀಸರು ಶ್ರೀಲಂಕಾದ ಕ್ರಿಕೆಟ್ ಆಟಗಾರನನ್ನ ಬಂಧಿಸಿದ್ದಾರೆ.ಎಡಗೈ ಬ್ಯಾಟ್ಸ್ ಮನ್ ಧನುಶ್ಕಾ ಗುಣತಿಲಕ(31) ಬಂಧಿತ ಕ್ರಿಕೆಟರ್.ಸಿಡ್ನಿ ಸಿಟಿ ಪೊಲೀಸರು ಭಾನುವಾರದಂದು ರೋಸ್ ಬೇ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ.29 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧನವಾಗಿದ್ದಾರೆ.ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಶ್ರೀಲಂಕಾ ತಂಡದ ಜೊತೆಗೆ ತೆರಳಿದ್ದ ಧನುಷ್ಕಾ ಗುಣತಿಲಕ ಇದೀಗ ಪೊಲೀಸರ ಅತಿಥಿ.ಸೆಮಿಫೈನಲ್ ತಲುಪಲು ವಿಫಲವಾದ ಹಿನ್ನಲೆ ತಂಡ ತವರಿಗೆ ಹಿಂದಿರುಗಿದೆ. ಧನುಶ್ಕಾ ಗುಣತಿಲಕ ಹೊರತುಪಡಿಸಿ ತಂಡ ವಾಪಸ್ ಆಗಿದೆ.ನಮಿಬಿಯಾ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿ ಗಾಯಾಳುವಾಗಿದ್ದ ಧನುಶ್ಕಾರನ್ನ ಸ್ಕ್ವಾಡ್ ನಿಂದ ಕೈ ಬಿಡಲಾಗಿತ್ತು.ನವೆಂಬರ್ 2 ರಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇವರ ಮೇಲಿದೆ.ಆನ್ ಲೈನ್ ಡೇಟಿಂಗ್ ಆಪ್ ನಲ್ಲಿ ಮಹಿಳೆಯನ್ನ ಪರಿಚಯಿಸಿಕೊಂಡಿದ್ದ ಧನುಷ್ಕಾ ಗುಣತಿಲಕ ಆಸ್ಟ್ರೇಲಿಯಾ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ…