
ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಗೆ ಬಿಸಿ ಮುಟ್ಟಿಸಿದ ಚೆಸ್ಕಾಂ ಜಾಗೃತ ದಳ…15 ಪ್ರಕರಣಗಳು ದಾಖಲು…
- CrimeMysore
- November 7, 2022
- No Comment
- 205
ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಗೆ ಬಿಸಿ ಮುಟ್ಟಿಸಿದ ಚೆಸ್ಕಾಂ ಜಾಗೃತ ದಳ…15 ಪ್ರಕರಣಗಳು ದಾಖಲು…
ಮೈಸೂರು,ನ7,Tv10 ಕನ್ನಡ
ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದೀರಾ…? ಹಾಗಿದ್ರೆ ಹುಷಾರ್ ಚೆಸ್ಕಾಂ ಜಾಗೃತ ದಳ ದಾಳಿ ನಡೆಸೋದು ಗ್ಯಾರೆಂಟಿ.ಇತ್ತೀಚೆಗೆ ಚೆಸ್ಕಾಂ ಜಾಗೃತ ದಳ ಯಶಸ್ವಿ ಕಾರ್ಯಾಚರಣೆ ನಡೆಸಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದ 15 ಮಂದಿ ಮೇಲೆ ಪ್ರಕರಣ ದಾಖಲಿಸಿದೆ.ಸೆಸ್ಕ್ ಜಾಗೃತ ದಳದ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಡಿವೈಎಸ್ಪಿ ಅನ್ಸರ್ ಆಲಿ ಮತ್ತು ಇ.ಇ.ತಬಸ್ಸಮ್ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.ಹುಣಸೂರಿನಲ್ಲಿ 3 ಪ್ರಕರಣಗಳು,ನಂಜನಗೂಡಿನಲ್ಲಿ 3 ಪ್ರಕರಣಗಳು,ಕೆ.ಆರ್.ನಗರದಲ್ಲಿ 2 ಹಾಗೂ ಮೈಸೂರು ತಾಲೂಕಿನಲ್ಲಿ 7 ಪ್ರಕರಣಗಳು ಪತ್ತೆಯಾಗಿದೆ.ವಿದ್ಯುತ್ ಕಂಬದಿಂದ ನೇರವಾಗಿ ಮನೆಗೆ ಸಂಪರ್ಕ ಪಡೆದಿರುವುದು,ವಿದ್ಯುತ್ ಶುಲ್ಕ ಪಾವತಿಸದೆ ಸಂಪರ್ಕ ಕಡಿತವಾಗಿದ್ದರೂ ಅಕ್ರಮವಾಗಿ ಸಂಪರ್ಕ ಪಡೆದಿರುವುದು,ಸಾರ್ವಜನಿಕ ಕುಡಿಯುವ ನೀರಿನ ಘಟಕದಿಂದ ಅಕ್ರಮವಾಗಿ ಸಂಪರ್ಕ ಪಡೆದಿರುವುದು ಹೀಗೆ ಹಲವಾರು ರೀತಿಯಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗಿದೆ.ಅಕ್ರಮಕ್ಕೆ ಸಾಥ್ ನೀಡಿದ ಆಲನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಬಿಳಿಕೆರೆ ಹೋಬಳಿಯ ಬೋಳನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಸೆಸ್ಕ್ ಜಾಗೃತ ದಳದ ನಿರೀಕ್ಷಕರಾದ ವಿನಯ್,ಎ.ಇ.ಇ.ಮನೀಷ್ ಪಾಠಕ್ ರವರ ಉಸ್ತುವಾರಿಯಲ್ಲಿ ಎ.ಇ.ಮಣಿಕಂಠಸ್ವಾಮಿ,ವಿಶ್ವನಾಥ್,ಕೌಸರ್,ತೋಂಟದಾರ್ಯ,ಜಗದೀಶ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.ಅಕ್ರಮ ಸಂಪರ್ಕ ಪಡೆಯಲು ಬಳಸಿದ ವಿದ್ಯುತ್ ಉಪಕರಣಗಳನ್ನ ಜಾಗೃತ ತಂಡ ವಶಪಡಿಸಿಕೊಂಡಿದೆ.ಚೆಸ್ಕಾಂ ಜಾಗೃತ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…