
ಮೈಸೂರು: 08-11-2022 ರ ಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಮಹಾನಗರ ಪಾಲಿಕೆ ಉಪಾಯುಕ್ತರು (ಅಭಿವೃದ್ದಿ) ರವರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ
- Mysore
- November 8, 2022
- No Comment
- 178

ಮೈಸೂರು: 08-11-2022 ರ ಮಾನ್ಯ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ಮಹಾನಗರ ಪಾಲಿಕೆ ಉಪಾಯುಕ್ತರು (ಅಭಿವೃದ್ದಿ) ರವರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕೈಗೊಂಡಿರುವ ಶಾಸಕರ ವಿವೇಚನಾ *ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ವಿಶೇಷ ಪ್ಯಾಕೇಜ್ ಅನುದಾನದಲ್ಲಿ *ವಾರ್ಡ್-21 ಕ್ಕೆ ಸೇರಿದ ಪಾರ್ಕ್ ಅಭಿವೃದ್ದಿ ಹಾಗೂ ಸ್ವಿಮ್ಮಿಂಗ್ ಫೂಲ್ ರಸ್ತೆಯ ಅಭಿವೃದ್ದಿ ಕಾಮಗಾರಿಯ ಮೊತ್ತ ರೂ.100.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು* ಭೂಮಿ ಪೂಜೆ ನೆರವೇರಿಸಿದ ನಂತರ ಪಕ್ಕದಲ್ಲಿರುವ ಈಜು ಕೊಳದ ಮುಂಬಾಗದ ವಿಶಾಲವಾದ ಜಾಗವು, ಅಶುಚಿತ್ವದಿಂದ ಕೂಡಿದ್ದು ಈ ರಸ್ತೆ, ಫುಟ್ ಪಾತ್, ಗಳನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಲು ಸ್ಥಳ ಪರಿಶೀಲನೆ ನಡೆಸಿ ಈ ಜಾಗದಲ್ಲಿ ತಿರುಗಾಡಲು ಉತ್ತಮ ರಸ್ತೆ, ಬೋಗಾದಿ ರಸ್ತೆಗೆ ಸೇರುವ ರಸ್ತೆ ಕಾಂಕ್ರೀಟ್ ರಸ್ತೆ ನಿರ್ಮಾಣ, ಇಂಟರ್ ಲಾಕಿಂಗ್, ಕುಳಿತುಕೊಳ್ಳಲು ಉತ್ತಮ ಕಾಂಕ್ರೀಟ್ ಆಸನ ಮೇಲ್ಚಾವಣಿ ಮುಂತಾದ ನವೀನ ಮಾದರಿಯಲ್ಲಿ ಅಭಿವೃದ್ದಿಗೊಳಿಸಲು ಅಂದಾಜು ಪಟ್ಟಿ ತಯಾರಿಸಿ ಅಗತ್ಯ ಅನುದಾನ ನೀಡಿ ಕಾಮಗಾರಿ ಪ್ರಾರಂಬಿಸಲು ಉಪ ಆಯುಕ್ತರು (ಅಭಿವೃದ್ದಿ) ಮೈಸೂರು ಮಹಾನಗರಪಾಲಿಕೆ ರವರಿಗೆ ಸೂಚನೆ ನೀಡಿದರು,
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಶ್ರೀ ಮಹೇಶ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರಗೌಡ, ಭಾ.ಜ.ಪ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಚಾಮರಾಜ ಕ್ಷೇತ್ರದ ಉಪಾಧ್ಯಕ್ಷರಾದ ಶ್ರೀ ಶಿವಕುಮಾರ್, ವಾರ್ಡ ಅಧ್ಯಕ್ಷರಾದ ಸೋಮಶೇಖರ ರಾಜೇ ಅರಸು, ಪ್ರಧಾನ ಕಾರ್ಯದರ್ಶಿ ರಮೇಶ್ & ಪುನೀತ್, ಬಿ.ಎಲ್.ಎ-1 ದಿನೇಶ್ ಗೌಡ, ಸುಯೋಗ ಆಸ್ಪತ್ರೆ ಯೋಗಣ್ಣ, ಮುಖಂಡರುಗಳಾದ ನವೀನ್, ಚಲುವ, ಗುತ್ತಿಗೆದಾರ ಅರವಿಂದ್, ಅಭಿವೃದ್ದಿ ಹೇಗಾನಂದ, ಇಂಜಿನಿಯರ್ ವೇಣುಗೋಪಾಲ್, ಗುತ್ತಿಗೆದಾರರಾದ ಶ್ರೀ ಪಿ.ಕೆ.ಕೃಷ್ಣರಾಜು ಮುಂತಾದವರು ಹಾಜರಿದ್ದರು.