ಸಂಸದರ ಹಣ ದುರುಪಯೋಗ ಆರೋಪ…ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಡಿಸಿ ಗೆ ದೂರು…
- Politics
- November 8, 2022
- No Comment
- 117
ಸಂಸದರ ಹಣ ದುರುಪಯೋಗ ಆರೋಪ…ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಡಿಸಿ ಗೆ ದೂರು…
ಮೈಸೂರು,ನ8,Tv10 ಕನ್ನಡ
ಸಂಸದ ಪ್ರತಾಪ್ ಸಿಂಹ ಅನುದಾನದ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರವನ್ನ ಹೊರತು ಪಡಿಸಿ ಟ್ರಸ್ಟ್ ವೊಂದಕ್ಕೆ ಅನುದಾನ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಕ್ಕಿಂಜೆ ಗ್ರಾಮದ ಬೆಂದ್ರಾಲಾ ವೆಂಕಟ ಕೃಷ್ಣ ಈರ್ವತ್ರಯ ಮೆಮೋರಿಯಲ್ ಟ್ರಸ್ಟ್ ಗೆ ಅನುದಾನ ನೀಡಿದ್ದಾರೆ.ಸಂಸದರ 28ಲಕ್ಷ ಅನುದಾನದಲ್ಲಿ ಆಂಬುಲೆನ್ಸ್ ನೀಡಲಾಗಿದೆ.ಡಾ. ಮುರುಳಿ ಕೃಷ್ಣ ಈರ್ವತ್ರಾಯ ಎಂಬುವವರು ಟ್ರಸ್ಟ್ ನಡೆಸುತ್ತಿದ್ದಾರೆ.ಇದೆ ವೈದ್ಯರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಿಗೆರೆಯಲ್ಲಿ ನಡೆಸುವ ಹೊಯ್ಸಳ ಆಸ್ಪತ್ರೆ ನಡೆಸುತ್ತಿದ್ದಾರೆ.
ಅದೇ ಆಸ್ಪತ್ರೆಗೆ ಪ್ರತಾಪ್ ಸಿಂಹ ಹೆಂಡತಿ ಅರ್ಪಿತಾ ಸಿಂಹ ನಿರ್ದೇಶಕಿಯಾಗಿದ್ದಾರೆ.
ಈ ಮೂಲಕ ಸಂಸದರ ಅನುದಾನ ದುರ್ಬಳಕೆಯಾಗಿದೆ.
ಕಾನೂನು ಉಲ್ಲಂಘನೆ ಆದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಬಹುದು.ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ
ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ರವರಿಗೆ ದೂರನ್ನು ನೀಡಿದ್ದಾರೆ.
ಸಾರ್ವಜನಿಕರಿಗೆ ಒಂದು ನ್ಯಾಯ ಬೇರೆ ಪಕ್ಷದವರಿಗೆ ಒಂದು ನ್ಯಾಯ ಮಾಡುವುದು ಸರಿಯಲ್ಲ.ಭ್ರಷ್ಟಾಚಾರದ ಆರೋಪವನ್ನು ಹೊತ್ತು ಚೆಕ್ ಮೂಲಕ ಹಣ ಪಡೆದವರು ಶ್ರೀಮಾನ್ ಯಡಿಯೂರಪ್ಪ.ನಿಮ್ಮ ಪಕ್ಷದಲ್ಲಿಯೇ ಲಂಚ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ.ನಿಮ್ಮ ಪಕ್ಷವನ್ನು ಹೊರತುಪಡಿಸಿ ಬೇರೆಯವರ ಪಕ್ಷದ ಬಗ್ಗೆ ಕಾನೂನಿನ ಪಾಠ ಮಾಡುತ್ತೀರಾ ಪ್ರತಾಪ್ ಸಿಂಹ..? ಎಂದು
ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ…