ಮುಡಾ ನಿವೇಶನವನ್ನೇ ಅಡವಿಟ್ಟ ಭೂಪರು…ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 14 ಕೋಟಿ ಸಾಲ ಪಡೆದ ಖದೀಮರು…ಐನಾತಿ ಭೂಗಳ್ಳರ ವಿರುದ್ದ FIR ದಾಖಲು…RTI ಕಾರ್ಯಕರ್ತನಿಂದ ಅಕ್ರಮ ಬಯಲು…

ಮುಡಾ ನಿವೇಶನವನ್ನೇ ಅಡವಿಟ್ಟ ಭೂಪರು…ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 14 ಕೋಟಿ ಸಾಲ ಪಡೆದ ಖದೀಮರು…ಐನಾತಿ ಭೂಗಳ್ಳರ ವಿರುದ್ದ FIR ದಾಖಲು…RTI ಕಾರ್ಯಕರ್ತನಿಂದ ಅಕ್ರಮ ಬಯಲು…

ಮುಡಾ ನಿವೇಶನವನ್ನೇ ಅಡವಿಟ್ಟ ಭೂಪರು…ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 14 ಕೋಟಿ ಸಾಲ ಪಡೆದ ಖದೀಮರು…ಐನಾತಿ ಭೂಗಳ್ಳರ ವಿರುದ್ದ FIR ದಾಖಲು…RTI ಕಾರ್ಯಕರ್ತನಿಂದ ಅಕ್ರಮ ಬಯಲು…

ಮೈಸೂರು,ನ9,Tv10 ಕನ್ನಡ

  • ನಕಲಿ ದಾಖಲೆ ಸೃಷ್ಟಿಸಿ ಮುಡಾಗೆ ವಂಚನೆ
  • ಮುಡಾ ನಿವೇಶನಕ್ಕೆ 14 ಕೋಟಿ ಸಾಲ ನೀಡಿದ ರಾಷ್ಟ್ರೀಕೃತ ಬ್ಯಾಂಕ್
  • RTI ಕಾರ್ಯಕರ್ತನಿಂದ ಅಕ್ರಮ ಬಯಲು
  • ಬ್ಯಾಂಕ್ ನಲ್ಲಿ ಸಾಲ ಪಡೆದು ಮತ್ತೊಬ್ಬರಿಗೆ ದಾನ ಪತ್ರ ಮಾಡಿರುವ ಐನಾತಿಗಳು
  • ಮೈಸೂರು ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಯಲ್ಲಿ ಭೂಗಳ್ಳರ ವಿರುದ್ದ FIR ದಾಖಲು

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬೇಜವಾಬ್ದಾರಿ ತನಕ್ಕೆ ಮತ್ತೊಂದು ಜ್ವಲಂತ ಉದಾಹರಣೆ ಸೇರ್ಪಡೆಯಾಗಿದೆ.ಮುಡಾಗೆ ಸೇರಿದ ಸುಮಾರು 25 ಕೋಟಿ ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಅಡವಿಟ್ಟ ಭೂಗಳ್ಳರು 14 ಕೋಟಿ ಸಾಲ ಪಡೆದ ಭಾರಿ ಅಕ್ರಮವೊಂದು ಬೆಳಕಿಗೆ ಬಂದಿದೆ.ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅಕ್ರಮವನ್ನ ದಾಖಲೆ ಸಮೇತ ಬಯಲಿಗೆಳೆದಿದ್ದಾರೆ.ಎಚ್ಚೆತ್ತ ಮುಡಾ ಅಧಿಕಾರಿಗಳು ಭೂಗಳ್ಳರ ವಿರುದ್ದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರು ನಗರ ಇಂಡಸ್ಟ್ರಿಯಲ್ ಸಬರ್ಬ್ 2 ನೇ ಹಂತ ವಿಶ್ವೇಶ್ವರನಗರದ ಶ್ರೀ ಜಯಚಾಮರಾಜೇಂದ್ರ ಪಿಯು ಕಾಲೇಜು ಶಾರದಾ ವಿದ್ಯಾಮಂದಿರ ಮುಂಭಾಗವಿರುವ ಕೈಗಾರಿಕಾ ನಿವೇಶನ ಸಂಖ್ಯೆ 36/A 285*200 ಅಡಿ ವಿಸ್ತೀರ್ಣ 57 ಸಾವಿರ ಚದರಡಿ ಅಳತೆಯ ನಿವೇಶನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿ.ಪ್ರಾಧಿಕಾರದ ದಾಖಲೆಗಳ ಪ್ರಕಾರ ಈ ವರೆಗೆ ಈ ನಿವೇಶನ ಯಾರಿಗೂ ಮಂಜೂರಾಗಿಲ್ಲ.ಹಲವು ಬಾರಿ ಹರಾಜಿಗೆ ಆಹ್ವಾನಿಸಿದರೂ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡ M/S RJDJ ಪ್ರಾಪರ್ಟೀಸ್ ನ ಮಾಲೀಕರಾದ ಲಕ್ಷ್ಮೇಗೌಡ,ಜಗದೀಶ್,ಶಶಿ ಹಾಗೂ ನಂಜಪ್ಪ ಇವರುಗಳು ಸದರಿ ನಿವೇಶನಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದಾರೆ.ಇದೇ ನಕಲಿ ದಾಖಲೆಗಳನ್ನ ಹಾಸನದಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ರಾಂಚ್ ನಲ್ಲಿ ಅಡವಿಟ್ಟು ಬರೋಬರಿ 14 ಕೋಟಿ ಸಾಲ ಪಡೆದಿದ್ದಾರೆ.ದಾಖಲೆಗಳನ್ನ ನಿಯಮಾನುಸಾರ ಪರಿಶೀಲಿಸದ ಬ್ಯಾಂಕ್ ಅಧಿಕಾರಿಗಳು 20-10-2018 ರಲ್ಲಿ ಭಾರಿ ಮೊತ್ತದ ಹಣವನ್ನೇ ಸಾಲವಾಗಿ ಕೊಟ್ಟಿದ್ದಾರೆ.

ಇದಿಷ್ಟೇ ಸಾಲದೆಂಬಂತೆ RJDJ ಪ್ರಾಪರ್ಟೀಸ್ ನ ಪಾಲುದಾರ ನಂಜಪ್ಪ ನಂಜನಗೂಡಿನ ಕುಪ್ಪರವಳ್ಳಿಯ ನಿವಾಸಿಯಾಗಿದ್ದು, 2020 ರಲ್ಲಿ ಸ್ನೇಹಿತನ ಮಗ ಹೇಮಂತರಾಜು ಎಂಬುವರಿಗೆ ದಾನಪತ್ರ ಮಾಡಿದ್ದಾನೆ.ಮುಡಾ ಆಸ್ತಿಯನ್ನ ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಪಡೆದ ನಂತರ ಐನಾತಿಗಳು ದಾನಪತ್ರವನ್ನೂ ಸಹ ಮಾಡಿದ್ದಾರೆ.

ಇವೆಲ್ಲಾ ಅಕ್ರಮವನ್ನ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆಗಳ ಸಮೇತ ಮುಡಾ ಆಯುಕ್ತ ದಿನೇಶ್ ಕುಮಾರ್ ಗೆ ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದಾರೆ.ನಂತರ ಎಚ್ಚೆತ್ತ ಆಯುಕ್ತರು ಹಾಗೂ ಕಾರ್ಯದರ್ಶಿ ವೆಂಕಟರಾಜು ದಾಖಲೆಗಳನ್ನ ಸಂಪೂರ್ಣವಾಗಿ ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಖಚಿತವಾಗಿದೆ.

ಈ ಸಂಭಂಧ ಸಾಲ ಪಡೆಯುವಾಗ ಭೂಗಳ್ಳರು ಒದಗಿಸಿರುವ ದಾಖಲೆಗಳನ್ನ ನೀಡುವಂತೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗೆ ಮುಡಾ ಆಯುಕ್ತರು ಪತ್ರ ಬರೆದಿದ್ದಾರೆ.ಈ ಪತ್ರಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಇದುವರೆಗೆ ಉತ್ತರ ಬಂದಿಲ್ಲ.

ಕೂಡಲೇ ಮುಡಾ ಆಯುಕ್ತರು ಪ್ರಾಧಿಕಾರದ ವಿಶೇಷ ತಹಸೀಲ್ದಾರ್ ಆರ್.ಮಂಜುನಾಥ್ ಮೂಲಕ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೇಗೌಡ,ಜಗದೀಶ,ಶಶಿ ಹಾಗೂ ನಂಜಪ್ಪ ವಿರುದ್ದ FIR ದಾಖಲಿಸಿದ್ದಾರೆ.

ಮತ್ತೊಂದು ವಿಶೇಷ ಏನೆಂದರೆ ಒಂದೆಡೆ ಖದೀಮರು 2018 ರಲ್ಲಿ ಮುಡಾ ಅಧಿಕಾರಿಗಳ ಗಮನಕ್ಕೆ ಬಾರದಂತೆ ಭಾರಿ ಮೊತ್ತದ ಸಾಲ ಪಡೆದರೆ ಮತ್ತೊಂದೆಡೆ ಮುಡಾ ಅಧಿಕಾರಿಗಳು ಸದರಿ ನಿವೇಶನದ ಅಭಿವೃದ್ದಿಗಾಗಿ 2021 ರಲ್ಲಿ 4 ಲಕ್ಷ 44 ಸಾವಿರ ಖರ್ಚು ಮಾಡಿದ್ದಾರೆ.

ತನ್ನ ಆಸ್ತಿಯ ರಕ್ಷಣೆಗಾಗಿ ಮುಡಾದಲ್ಲಿ ವಿಶೇಷ ತಂಡವನ್ನೇ ರಚಿಸಬೇಕಾಗಿದೆ.ಪ್ರತಿದಿನ ಇಂತಹ ಬೆಲೆಬಾಳುವ ಆಸ್ತಿಯ ಮೇಲೆ ಹದ್ದಿನ ಕಣ್ಣಿಡಬೇಕಾದ ಜವಾಬ್ದಾರಿ ಈ ತಂಡಕ್ಕೆ ನೀಡಬೇಕಿದೆ.ರಾಜಾರೋಷವಾಗಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆಯುತ್ತಾರೆ ಅಂದಲ್ಲಿ ಕೆಲವು ಸಿಬ್ಬಂದಿಗಳು ಶಾಮೀಲಾಗಿರುತ್ತಾರೆ.ಇದರಲ್ಲಿ ಯಾವುದೇ ಸಂಶಯವಿಲ್ಲ.ಕೇವಲ ಭೂಗಳ್ಳರ ವಿರುದ್ದ ಪ್ರಕರಣ ದಾಖಲಿಸಿ ಕೈಕಟ್ಟಿ ಕುಳಿತುಕೊಳ್ಳದೆ ವಂಚಕರಿಗೆ ಸಹಕರಿಸಿದ ಮುಡಾ ಸಿಬ್ಬಂದಿಗಳ ವಿರುದ್ದವೂ ಆಯುಕ್ತರು ಕಠಿಣ ಕ್ರಮ ಕೈಗೊಳ್ಳಬೇಕಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *