
ಲವ್ ಬ್ರೇಕ್ ಅಪ್…ಪ್ರಿಯತಮೆಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ…ಮೈಸೂರಿನಲ್ಲಿ ಘಟನೆ…
- CrimeMysore
- November 15, 2022
- No Comment
- 226
ಲವ್ ಬ್ರೇಕ್ ಅಪ್…ಪ್ರಿಯತಮೆಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ…ಮೈಸೂರಿನಲ್ಲಿ ಘಟನೆ…
ಮೈಸೂರು,ನ15,Tv10 ಕನ್ನಡ
ಲವ್ ಬ್ರೇಕ್ ಅಪ್ ಆದ ಹಿನ್ನಲೆ ಭಗ್ನಪ್ರೇಮಿಯೊಬ್ಬ ಪ್ರಿಯತಮೆಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ಹೆಬ್ಬಾಳ್ ಬಡಾವಣೆಯ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದಿದೆ.ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶುಶ್ರೂಷಕಿ ಜ್ಞಾನಶ್ರೀ ಎಂಬಾಕೆಗೆ ಚಾಕುವಿನಿಂದ ಇರಿಯಲಾಗಿದೆ.ಪ್ರಿಯತಮ ಯಳಂದೂರಿನ ನಿವಾಸಿ ನಂಜುಂಡಸ್ವಾಮಿ ಕೃತ್ಯವೆಸಗಿದ್ದಾನೆ.ಆಸ್ಪತ್ರೆಗೆ ನುಗ್ಗಿದ ನಂಜುಂಡಸ್ವಮಿ ಹಾಡು ಹಗಲೇ ಕೃತ್ಯವೆಸಗಿದ್ದಾನೆ.ಜ್ಞಾನಶ್ರೀ ನೆರವಿಗೆ ಬಂದ ಮತ್ತೊಬ್ಬ ನರ್ಸ್ ಮೇಲೂ ದಾಳಿ ಮಾಡಿದ್ದಾನೆ ಎನ್ನಲಾಗಿದೆ.ಕೂಡಲೇ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಜ್ಞಾನಶ್ರೀಯನ್ನ ರಕ್ಷಿಸಿದ್ದಾರೆ.ಕೆಲವು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರೆಂದು ಹೇಳಲಾಗಿದ್ದು ಇತ್ತೀಚೆಗೆ ಜ್ಞಾನಶ್ರೀ ಪ್ರಿಯತಮನಿಂದ ಅಂತರ ಕಾಯ್ದುಕೊಂಡಿದ್ದಾಳೆ.ಇದರಿಂದ ಬೇಸತ್ತ ನಂಜುಂಡಸ್ವಾಮಿ ಕೊಲೆಗೆ ಯತ್ನಿಸಿದ್ದಾನೆ.ಜ್ಞಾನಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಪ್ರಕರಣ ದಾಖಲಾಗಿದೆ…