
ಟಿಪ್ಪರ್ ಗೆ ನೇಣು ಬಿಗಿದು ಡ್ರೈವರ್ ಆತ್ಮಹತ್ಯೆ…ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ…
- CrimeTV10 Kannada Exclusive
- November 16, 2022
- No Comment
- 177
ಟಿಪ್ಪರ್ ಗೆ ನೇಣು ಬಿಗಿದು ಡ್ರೈವರ್ ಆತ್ಮಹತ್ಯೆ…ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ…

ಕೆ.ಆರ್.ಎಸ್,ನ15,Tv10 ಕನ್ನಡ
ಟಿಪ್ಪರ್ ನ ಕೊಕ್ಕೆಗೆ ಡ್ರೈವರ್ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಎಸ್.ನಲ್ಲಿ ನಡೆದಿದೆ.ಮದ್ದೂರು ತಾಲೂಕು ಮಾದರಹಳ್ಳಿ ಗ್ರಾಮದ ನಿವಾಸಿ ಸುನಿಲ್ ( 25) ಮೃತ ದುರ್ದೈವಿ. ಕೆಆರ್‌ಎಸ್ ಬಳಿಯ ಇಲವಾಲ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಮಿಕ್ಸಿಂಗ್ ಪ್ಲಾಂಟ್ ನಲ್ಲಿ ಘಟನೆ ನಡೆದಿದೆ. ಜಲ್ಲಿ ತುಂಬಿಕೊಂಡು ಟಿಪ್ಪರ್ ನಲ್ಲಿ ಬಂದಿದ್ದು ಅನ್ಲೋಡ್ ಮಾಡಿದ ನಂತರ ಇತರೆ ಲಾರಿಯವರು ಕರೆದರೂ ಇಲ್ಲೇ ಮಲಗುತ್ತೇನೆ ಎಂದು ಟಿಪ್ಪರ್ ನಿಲ್ಲಿಸಿ ಮಲಗಿದ್ದ ಸುನಿಲ್ ರಾತ್ರಿ ಟಿಪ್ಪರ್ ಬಾಡಿಯ ಕೊಕ್ಕೆಗೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ ಆರ್ ಎಸ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಕೈಗೊಂಡಿರುತ್ತಾರೆ…