ನಾಳೆ ಪ್ರತಾಪ್ ಸಿಂಹ ವಿರುದ್ದ ಎಸ್.ಡಿ.ಪಿ.ಐ.ಪ್ರತಿಭಟನೆ…
- TV10 Kannada Exclusive
- November 17, 2022
- No Comment
- 139
ನಾಳೆ ಪ್ರತಾಪ್ ಸಿಂಹ ವಿರುದ್ದ ಎಸ್.ಡಿ.ಪಿ.ಐ.ಪ್ರತಿಭಟನೆ…
ಮೈಸೂರು,ನ17,Tv10 ಕನ್ನಡ
ಫೆಡರೇಶನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಸೇಶನ್ ಮತ್ತು ಎಸ್.ಡಿ.ಪಿ.ಐ ವತಿಯಿಂದ ಮೌಲಾನಾ ಅರ್ಶದ್ ಅಹಮದ್ ಹಾಗೂ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು 100-120 ಪ್ರತಿಭಟನಾಕಾರರು ಭಾಗವಹಿಸಲಿದ್ದಾರೆ. ರಂಗಾಯಣ ನಿರ್ಧೇಶಕರಾದ ಅಡ್ಡಂಡ ಕಾರ್ಯಪ್ಪ ರವರು ಟಿಪ್ಪು ನಿಜಕನಸುಗಳು ನಾಟಕ ಕೃತಿ ಬರೆದು ಟಿಪ್ಪುವಿನ ಬಗ್ಗೆ ಅವಹೇಳನ ಮಾಡುತ್ತಿದ್ದಾರೆಂದು ಆರೋಪಿಸಿ,ರಂಗಾಯಣದಲ್ಲಿ ನಾಟಕ ನಡೆಯದಂತೆ ಒತ್ತಾಯಿಸಿ ಹಾಗೂ
ಸಂಸದ ಪ್ರತಾಪ್ ಸಿಂಹ ಪ್ರತಿ ನಿತ್ಯ ಮುಸ್ಲಿಂ ಸಮುದಾಯದ ಬಗ್ಗೆ ಬಳಸುತ್ತಿರುವ ಶಬ್ದಗಳು ಮುಸ್ಲಿಂ ಸಮುದಾಯದ ಜನರಿಗೆ ನೋವು ತರುತ್ತಿದೆ.ಕೆ.ಆರ್ ಕ್ಷೇತ್ರದಲ್ಲಿ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಗುಂಬಸ್ ಅನ್ನು ಜೆಸಿಬಿ ತಂದು ಮುರಿಯುತ್ತೇನೆ ಎಂಬ ಹೇಳಿಕೆ ಖಂಡಿಸಿ,
ಸಂಸದರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.
ನಾಟಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಕಾಲ್ಪನಿಕ ಸನ್ನಿವೇಶ ಹಾಗೂ ಪಾತ್ರವನ್ನು ಸೃಷ್ಟಿ ಮಾಡಲಾಗಿದೆ. ಅಡ್ಡಂಡ ಕಾರ್ಯಪ್ಪ ಜವಾಬ್ದಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಲಿದ್ದಾರೆ…