ಬ್ರಾಹ್ಮಣ ಸಮುದಾಯದ ಬಗ್ಗೆ ಹಗುರ ಮಾತು…ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ದ ದೂರು…
- Mysore
- November 18, 2022
- No Comment
- 98
ಬ್ರಾಹ್ಮಣ ಸಮುದಾಯದ ಬಗ್ಗೆ ಹಗುರ ಮಾತು…ಪ್ರಗತಿಪರ ಚಿಂತಕ ಪ.ಮಲ್ಲೇಶ್ ವಿರುದ್ದ ದೂರು…
ಮೈಸೂರು,ನ18,Tv10 ಕನ್ನಡ :
ಬ್ರಾಹ್ಮಣರು ಮತ್ತು ಬ್ರಾಹ್ಮಣ್ಯಿಕೆ ಬಗ್ಗೆ ಸಾರ್ವಜನಿಕ ಸಮಾರಂಭದಲ್ಲೇ ಅವಹೇಳನ ಮಾಡಿರುವ ಪ್ರಗತಿಪರ ಚಿಂತಕ ಪ ಮಲ್ಲೇಶ್ ವಿರುದ್ದ ಇದೀಗ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ರಾಹ್ಮಣ ಸಂಘಟನೆಗಳ ಒಕ್ಕೂಟದ ವತಿಯಿಂದ ದೂರು ದಾಖಲಿಸಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಿದ್ದರಾಮಯ್ಯ 75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ, ಪ ಮಲ್ಲೇಶ್ ಬ್ರಾಹ್ಮಣರು ಹಾಗು ಬ್ರಾಹ್ಮಣ ಜಾತಿಯ ನಿಂದನೆ ಮಾಡಿದ್ದರು.ಹೀಗಾಗಿ ಕಳೆದ ಬುಧವಾರ ರಾತ್ರಿ ಬ್ರಾಹ್ಮಣ ಸಮಾಜದ ಮುಖಂಡರು ತುರ್ತು ಸಭೆ ಸೇರಿ ಪ.ಮಲ್ಲೇಶ್ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನ ಕೈಗೊಂಡಿದ್ದರು.ಅದೇ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪ ಮಲ್ಲೇಶ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಲಿಖಿತ ದೂರು ದಾಖಲಿಸಿದ್ದಾರೆ..