
ಕಾಡಾನೆ ದಾಳಿ…ದಸರಾ ಆನೆ ಗೋಪಾಲ ಸ್ವಾಮಿ ಸಾವು…
- Mysore
- November 23, 2022
- No Comment
- 204

ಕಾಡಾನೆ ದಾಳಿ…ದಸರಾ ಆನೆ ಗೋಪಾಲ ಸ್ವಾಮಿ ಸಾವು…

ಮೈಸೂರು,ನ23,Tv10 ಕನ್ನಡ
ಕಾಡಾನೆ ದಾಳಿ ನಡೆಸಿದ ಪರಿಣಾಮ ದಸರಾ ಆನೆ
ಗೋಪಾಲಸ್ವಾಮಿ ಸಾವನ್ನಪ್ಪಿದೆ.14 ದಸರಾ ಮಹೋತ್ಸವದಲ್ಲಿ ಬಾಗಿಯಾಗಿದ್ದ ಗೋಪಾಲಸ್ವಾಮಿ ಸಾವನ್ನಪ್ಪಿದೆ.
ಮೇಯಲು ಬಿಟ್ಟಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ.ಕೊಳುವಿಗೆ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.
ನೇರಳಕುಪ್ಪೆ ಬಿ ಹಾಡಿ ಕ್ಯಾಂಪಿನಲ್ಲಿ ಗೋಪಾಲಸ್ವಾಮಿ ಇತ್ತು.ಪುಂಡಾಟ ನಡೆಸುತ್ತಿದ್ದ ಕಾಡಾನೆ ಅಯ್ಯಪ್ಪ ದಾಳಿಗೆ ಗೋಪಾಲಸ್ವಾಮಿ ಬಲಿಯಾಗಿದೆ.
ಅಯ್ಯಪ್ಪ ಆನೆಗೆ ಕಾಲರ್ ಅಳವಡಿಸಲಾಗಿತ್ತು.
ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದೆ.
ದಾಳಿಯಲ್ಲಿ ಗೋಪಾಲಸ್ವಾಮಿ ಕಾಲು, ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿತ್ತು.
ನಾಲ್ಕು ವೈದ್ಯರ ತಂಡದಿಂದ ಚಿಕಿತ್ಸೆ ಕೊಡಲಾಗಿತ್ತು.
ಚಿಕಿತ್ಸೆ ಫಲಿಸದೆ ಮಧ್ಯಾಹ್ನ 1 ಗಂಟೆಯಲ್ಲಿ ಆನೆ ಸಾವನ್ನಪ್ಪಿದೆ.
ಡಿಸಿಎಫ್ ಹರ್ಷಕುಮಾರ್ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.
ಶಾಂತಸ್ವಾಭಾವದ ಗೋಪಾಲಸ್ವಾಮಿ ಆನೆ.
ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು.
ಕಳೆದ ವರ್ಷ ಶ್ರೀರಂಗಪಟ್ಟಣದ ದಸರಾ ಮಹೋತ್ಸವ ಉದ್ಘಾಟನೆ ವೇಳೆ ಜನದಟ್ಟಣೆ, ಪಟಾಕಿ ಶಬ್ದದಿಂದ ವಿಚಲಿತನಾಗಿತ್ತು…
