
ಲಷ್ಕರ್ ಠಾಣೆ ಸಿಬ್ಬಂದಿಗಳಿಂದ ಸೈಲೆಂಟಾಗಿ ನಡೀತಿದೆ ರಾತ್ರಿ ಕಾರ್ಯಾಚರಣೆ…ಅದೇನು ಗೊತ್ತಾ…?
- TV10 Kannada Exclusive
- November 24, 2022
- No Comment
- 204
ಲಷ್ಕರ್ ಠಾಣೆ ಸಿಬ್ಬಂದಿಗಳಿಂದ ಸೈಲೆಂಟಾಗಿ ನಡೀತಿದೆ ರಾತ್ರಿ ಕಾರ್ಯಾಚರಣೆ…ಅದೇನು ಗೊತ್ತಾ…?
ಮೈಸೂರು,ನ25,Tv10 ಕನ್ನಡ
ಕಳ್ಳರು ಚಾಪೆ ಕೆಳಗೆ ತೂರಿದ್ರೆ ಪೊಲಿಸರು ರಂಗೋಲಿ ಕೆಳಗೆ ತೂರ್ತಾರೆ ಅನ್ನೋಕ್ಕೆ ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಉದಾಹರಣೆ.ಯಾಕೆ ಅಂತೀರಾ..? ಲಷ್ಕರ್ ಠಾಣೆಯ ಖಾಕಿ ಪಡೆ ಸೈಲೆಂಟಾಗಿ ರಾತ್ರಿ ವೇಳೆ ನಡೆಸ್ತಿರೋ ಕಾರ್ಯಾಚರಣೆ ಇದಕ್ಕೆ ಸಾಕ್ಷಿ. ಹೌದು…ಖದೀಮರ ಹೆಡೆಮುರಿ ಕಟ್ಟಲು ಲಷ್ಕರ್ ಠಾಣೆ ಪೊಲೀಸರು.ರಾತ್ರಿ ವೇಳೆ ಅನಗತ್ಯವಾಗಿ ಓಡಾಡುವವರ ಡಾಟಾ ಸಂಗ್ರಹಿಸುತ್ತಿದೆ.ರಾತ್ರಿ ಹತ್ತು ಗಂಟೆ ನಂತರ ಕಾರಣವಿಲ್ಲದೆ ಅನಗತ್ಯವಾಗಿ ಓಡಾಡುವವರ ಸಂಪೂರ್ಣ ವಿವರ ಸಂಗ್ರಹಿಸಿ ದಾಖಲಿಸುತ್ತಿದ್ದಾರೆ.ಅನಗತ್ಯವಾಗಿ ಓಡಾಡುವವರ ವಿಳಾಸ,ಮಾಡುವ ವೃತ್ತಿ,ಆಧಾರ್ ಕಾರ್ಡ್ ಹೀಗೆ ಸಂಪೂರ್ಣ ವಿವರವನ್ನ ಭಾವಚಿತ್ರದ ಸಮೇತ ದಾಖಲಿಸುತ್ತಿದ್ದಾರೆ.
ಒಂಟಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವುದು,ಸರಗಳ್ಳತನ,ಪಿಕ್ ಪಾಕೆಟ್,ಸುಲಿಗೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್,ಪಿಎಸ್ಸೈಗಳಾದ ಧನಲಕ್ಷ್ಮಿ ಹಾಗೂ ಗೌತಮ್ ರವರ ನೇತೃತ್ವದ ತಂಡ ಚುರುಕಿನಿಂದ ಕಾರ್ಯಾಚರಣೆ ನಡೆಸುತ್ತಿದೆ.ಈಗಾಗಲೇ ನೂರಾರು ಮಂದಿಯ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಸಮಾಜ ಘಾತುಕ ಶಕ್ತಿಗಳನ್ನ ಸೆದೆಬಡಿಯಲು ತಮ್ಮದೇ ರೂಟ್ ಹಿಡಿದಿದ್ದಾರೆ.ಅನುಮಾನಾಸ್ಪದ ವ್ಯಕ್ತಿಗಳನ್ನ ಠಾಣೆಗೆ ಕರೆತಂದು ವಿಚಾರಣೆಗೂ ಒಳಪಡಿಸಿದ್ದಾರೆ.ಈಗಾಗಲೇ ಈ ಕಾರ್ಯಾಚರಣೆ ನಿಗೂಢ ಕೊಲೆ ಪ್ರಕರಣವೊಂದನ್ನ ಭೇಧಿಸಲು ನೆರವಾಗಿದೆ.ಕೇವಲ 24 ಗಂಟೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.ರಾತ್ರಿಯ ಈ ಕಾರ್ಯಾಚರಣೆಯಲ್ಲಿ ಹಂತಕ ಸಿಕ್ಕಿಬಿದ್ದಿದ್ದಾನೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್,ಡಿಸಿಪಿ ಪ್ರದೀಪ್ ಘಂಟಿ ಹಾಗೂ ಗೀತಾಪ್ರಸನ್ನ ಮತ್ತು ಎಸಿಪಿ ಶಶಿಧರ್ ರವರ ಮಾರ್ಗದರ್ಶನ ಇನ್ಸ್ಪೆಕ್ಟರ್ ಸಂತೋಷ್ ಅಂಡ್ ಟೀಂ ಗೆ ಇಮ್ಮಡಿಯಾದ ಶಕ್ತಿ ತುಂಬಿದೆ.ಇಂತಹ ಕಾರ್ಯಾಚರಣೆ ಎಲ್ಲಾ ಠಾಣೆಗಳಿಗೂ ವಿಸ್ತರಣೆಯಾದರೆ ಒಳಿತು.ರಾತ್ರಿ ಕಾರ್ಯಾಚರಣೆ ಮೂಲಕ ಸಾರ್ವಜನಿಕರಿಗೆ ನೆಮ್ಮದಿ ತರಲು ಶ್ರಮಿಸುತ್ತಿರುವ ಸಂತೋಷ್ ಅಂಡ್ ಟೀಂ ಗೆ ಗುಡ್ ಲಕ್…