
ನಾರಾಯಣಚಾರ್ಯರ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ:ಬಿ.ಬಿ.ಎಂ.ಪಿ ಜಂಟಿ ಕಮಿಷನರ್ ಪೂರ್ಣಿಮಾ ಕೆ. ವಿ ಅಭಿಪ್ರಾಯ…
- TV10 Kannada Exclusive
- November 26, 2022
- No Comment
- 149
ನಾರಾಯಣಚಾರ್ಯರ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ:ಬಿ.ಬಿ.ಎಂ.ಪಿ ಜಂಟಿ ಕಮಿಷನರ್ ಪೂರ್ಣಿಮಾ ಕೆ. ವಿ ಅಭಿಪ್ರಾಯ…
ಮೈಸೂರು,ನ26,Tv10 ಕನ್ನಡ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಾಡು- ನುಡಿ, ಸಂಸ್ಕೃತಿ ,ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ, ವಿದ್ವತ್ ಪೂರ್ಣ ಬರವಣಿಗೆಯ ಮೂಲಕ ಭಾರತೀಯ ಸಾಹಿತ್ಯ ಪ್ರಪಂಚವನ್ನು ಶ್ರೀಮಂತ ಗೊಳಿಸಿದ ಬಹುಭಾಷಾ ವಿದ್ವಾಂಸ ಪ್ರೊ.ಕೆ ಎಸ್ ನಾರಾಯಣಾಚಾರ್ಯರ ಪ್ರಥಮ ಪುಣ್ಯ ಸ್ಮರಣೆ ಆಚಾರ್ಯ ಸ್ಮರಣ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾರಾಯಣಾಚಾರ್ಯ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಿ .ಬಿ.ಎಂ.ಪಿ ಜಂಟಿ ಕಮಿಷನರ್ ಪೂರ್ಣಿಮಾ ಕೆ. ವಿ ರವರು
ಡಾ, ಕೆ ಎಸ್ ನಾರಾಯಣಚಾರ್ಯರು ಅವರು ರಚಿಸಿದ ಗ್ರಂಥಗಳ ರಚನೆ ಹಿಂದೂ ಸಮಾಜಕ್ಕೆ ಶಾಶ್ವತ ಕೊಡುಗೆ ಎಂದು ಬಣ್ಣಿಸಿದರು.
ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಅಧ್ಯಾಪಕರು ಅವರು
ಕನ್ನಡ ಮತ್ತು ಸಂಸ್ಕೃತಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು, ರಾಷ್ಟ್ರಭಕ್ತಿ, ಸಂಸ್ಕೃತಗಳ ಪರಮ ಆರಾಧಕರಾಗಿದ್ದರು, ನಂಬಿದ ಮೌಲ್ಯಗಳಿಗೆ ನಿಷ್ಠರಾಗಿ ಬದುಕಿದವರು, ರಾಮಾಯಣ ಹಾಗೂ ಮಹಾಭಾರತದ ಪ್ರವಚನದಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು, ನಡೆದಾಡುವ ಸನಾತನ ಗ್ರಂಥಾ ಎಂದು ಅವರನ್ನು ಕರೆಯಲಾಗುತ್ತಿತ್ತು,
ಶಿಕ್ಷಣ ಹಾಗೂ ಪ್ರವಚನಗಳಿಂದ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದರು, ಅವರ ಪುಸ್ತಕ ಮತ್ತು ಲೇಖನ ಹಾಗೂ ವಚನ ಮಾಲಿಕೆಗಳ ಮೂಲಕ ನಮ್ಮೊಂದಿಗೆ ಶಾಶ್ವತವಾಗಿದ್ದಾರೆ
ಎಂದು ಹೇಳಿದರು.
ನಂತರ ಮಾತನಾಡಿದ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್
ಸರ್ಕಾರ ಸಹ ಅವರ ಹೆಸರನ್ನು
ಶಾಶ್ವತವಾಗಿರಿಸುವಂತೆ ಮೈಸೂರಿನ ಗ್ರಂಥಾಲಯಕ್ಕೆ ಅವರ ಹೆಸರನ್ನು ಇರಿಸಬೇಕು ಎಂದು ಆಗ್ರಹಿಸಿದರು
ಕಾರ್ಯಕ್ರಮದಲ್ಲಿ
ಬಿ.ಬಿ.ಎಂ.ಪಿ ವಿಶೇಷ ಅಧಿಕಾರಿ ಎಸ್ ಎನ್ ಶಂಕರ್,ಪರಮ ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ,
ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ಸದಸ್ಯರಾದ ಎಂ ಆರ್ ಬಾಲಕೃಷ್ಣ, ವಿಪ್ರ ಮುಖಂಡರಾದ ನಂ ಶ್ರೀಕಂಠ ಕುಮಾರ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಗೌರವಾಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಅರ್ಚಕರ ಸಂಘದ ಸಹಕಾರ್ಯದರ್ಶಿ ಪ್ರಶಾಂತ್, ಟಿ ಎಸ್ ಅರುಣ್, ಸುಚಿಂದ್ರ, ಚಕ್ರಪಾಣಿ, ರಾಕೇಶ್ ಭಟ್, ಶ್ರೀನಿವಾಸ ಪ್ರಸಾದ್, ಜಯಸಿಂಹ ಶ್ರೀಧರ್, ಅಪೂರ್ವ ಸುರೇಶ್, ಕೆ ಎಂ ನಿಶಾಂತ್, ಹಾಗೂ ಇನ್ನಿತರರು ಹಾಜರಿದ್ದರು…