
ಇಂದು ಮೈಸೂರು ನಗರ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ…ಬಾಡಿಗೆ ಮನೆ ನೀಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಿರುವ ಕಮೀಷನರ್ ಬಿ.ರಮೇಶ್…
- MysoreTV10 Kannada Exclusive
- November 26, 2022
- No Comment
- 151

ಇಂದು ಮೈಸೂರು ನಗರ ಪೊಲೀಸ್ ಆಯುಕ್ತರ ಸುದ್ದಿಗೋಷ್ಠಿ…ಬಾಡಿಗೆ ಮನೆ ನೀಡುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಿರುವ ಕಮೀಷನರ್ ಬಿ.ರಮೇಶ್…

ಮೈಸೂರು,ನ26,Tv10 ಕನ್ನಡ
ಮೈಸೂರು ನಗರದಲ್ಲಿ ಮನೆ ಬಾಡಿಗೆ ನೀಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಮನೆ ಮಾಲೀಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಇಂದು ನಗರ ಪೊಲೀಸ್ ಕಮೀಷನರ್ ಬಿ.ರಮೇಶ್ ರವರು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದಾರೆ.ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ನಂತರ ಮೈಸೂರು ಪೊಲೀಸರು ಅಲರ್ಟ್ ಆಗಿದ್ದಾರೆ.ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗೆ ಮೈಸೂರಿನ ನಂಟು ಇರುವುದು ಬೆಳಕಿಗೆ ಬಂದಿದೆ.ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದನ್ನ ಬಾಡಿಗೆ ಪಡೆದ ಆರೋಪಿ ಸಾಕಷ್ಟು ದಿನಗಳ ಕಾಲ ಸುತ್ತಾಡಿದ್ದಾನೆ.ಈತನ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ.ಮೈಸೂರಿನ ಹಲವು ಮಂದಿ ವಿಚಾರಣೆಗೆ ಒಳಪಟ್ಟಿದ್ದಾರೆ.ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸರು ಸಮಾಜಘಾತುಕ ಶಕ್ತಿಗಳನ್ನ ಸೆದೆಬಡಿಯಲು ತಮ್ಮದೇ ಯೋಜನೆಯನ್ನ ರೂಪಿಸಿದ್ದಾರೆ.ಅದ್ರಲ್ಲೂ ಬಾಡಿಗೆ ಮನೆ ನೀಡಬೇಕಿದ್ದಲ್ಲಿ ಹಲವು ನಿಯಮಗಳನ್ನ ಪಾಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಪೊಲೀಸ್ ಕಮೀಷನರ್ ಇಂದು ಸುದ್ದಿಗೋಷ್ಠಿ ಕರೆದಿದ್ದಾರೆ.ಅಲ್ಲದೆ ಸಂಚಾರಕ್ಕೆ ಸಂಬಂಧಪಟ್ಟ ವಿಚಾರಗಳು ಹಾಗೂ ಇತರೆ ವಿಚಾರಗಳ ಸಂಬಂಧ ಮಾಹಿತಿ ನೀಡಲಿದ್ದಾರೆ…