- November 27, 2022
ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣದ ಗೋಪುರ ರಾತ್ರೋ ರಾತ್ರಿ ಮಾಯ…ಯಾರು ತೆರವುಗೊಳಿಸಿದ್ದು…?


ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣದ ಗೋಪುರ ರಾತ್ರೋ ರಾತ್ರಿ ಮಾಯ…ಯಾರು ತೆರವುಗೊಳಿಸಿದ್ದು…?

ಮೈಸೂರು,ನ27,Tv10 ಕನ್ನಡ
Mysore#Busstand #doom#demolish#
ಭಾರಿ ವಿವಾದ ಸೃಷ್ಟಿಸಿದ್ದ ಬಸ್ ತಂಗುದಾಣದ ಎರಡು ಗೋಪುರಗಳು ರಾತ್ರೋ ರಾತ್ರಿ ಮಾಯವಾಗಿದೆ.ಮೈಸೂರು- ಊಟಿ ರಸ್ತೆಯಲ್ಲಿ ನಿರ್ಮಣವಾಗಿದ್ದ ಬಸ್ ತಂಗುದಾಣದ ಎರಡು ಗೋಪುರಗಳನ್ನ ತೆರುವುಗೊಳಿಸಲಾಗಿದೆ.ಕೇವಲ ಮಧ್ಯದ ಒಂದು ಗೋಪುರ ಮಾತ್ರ ಉಳಿದಿದೆ.ಎರಡು ಗೋಪುರಗಳ ಕುರುಹ ಇಲ್ಲದಂತೆ ಮಾಡಲಾಗಿದೆ.ಗೋಲ್ ಗುಂಬಸ್ ಮಾದರಿ ಬಸ್ ತಂಗುದಾಣ ನಿರ್ಮಾಣವಾಗಿದೆ ಎಂಬ ವಿವಾದ ಹೊತ್ತ ಈ ನಿಲ್ದಾಣ ತೆರುವಿಗಾಗಿ ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದಿದ್ದರು.ಇದು ಗುಂಬಸ್ ಮಾದರಿ ಅಲ್ಲ ಎಂದು ಶಾಸಕ ರಾಮದಾಸ್ ಹಾಗೂ ಪ್ರಗತಿಪರರು ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದರು.ಗೋಒಉರವನ್ನ ತೆರವುಗೊಳಿಸಲು ನಾವು ಬಿಡುವುದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದರು.ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂಗುದಾಣವನ್ನ ತೆರುವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ನೋಟೀಸ್ ನೀಡಿತ್ತು.ಇದರ ಬಗ್ಗೆ ವಿವಾದ ಚರ್ಚೆ ಮಾಡದಂತೆ ನ್ಯಾಯಾಲಯ ಬ್ರೇಕ್ ಹಾಕಿತ್ತು.ಇವೆಲ್ಲವುಗಳ ಮಧ್ಯೆ ರಾತ್ರೋ ರಾತ್ರಿ ತಂಗುದಾಣದ ಮೇಲಿದ್ದ ಎರಡು ಗೋಪುರಗಳು ಪುರಾವೆ ಇಲ್ಲದಂತೆ ಮಾಯವಾಗಿದೆ.ಗೋಪುರಗಳನ್ನ ತೆರುವುಗೊಳಿಸಿದವರು ಯಾರು ಎಂಬ ಯಕ್ಷ ಪ್ರಶ್ನೆ ಇದೀಗ ನಮ್ಮ ಮುಂದಿದೆ…