
KREDLಇಂಜಿನಿಯರ್ ಅನುಮಾನಾಸ್ಪದ ಸಾವು…ಕಾರಣವೂ ನಿಗೂಢ…
- CrimeMysore
- November 28, 2022
- No Comment
- 156
KREDLಇಂಜಿನಿಯರ್ ಅನುಮಾನಾಸ್ಪದ ಸಾವು…ಕಾರಣವೂ ನಿಗೂಢ…
ಮೈಸೂರು,ನ28,Tv10 ಕನ್ನಡ
ಕೆಪಿಟಿಸಿಎಲ್ ನ ಇಂಜಿನಿಯರ್ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ಸೋಲಾರ್ ಎನರ್ಜಿ ವಿಭಾಗದಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್ ಕುಮಾರ್(52) ಮೃತ ದುರ್ದೈವಿ.2002 ರಲ್ಲಿ ಆಶಾ ಎಂಬುವರನ್ನ ವಿವಾಹವಾಗಿದ್ದ ದಿನೇಶ್ ಕುಮಾರ್ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.ರಾತ್ರಿ ಎಂದಿನಂತೆ ಮಲಗಿದ ದಿನೇಶ್ ಕುಮಾರ್ ಬೆಳಿಗ್ಗೆ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ.ದಿನೇಶ್ ಸಾವು ಸಹಜವಲ್ಲ ಪತ್ನಿ ಎಂದು ಸಂಭಂಧಿಕರು ಆರೋಪಿಸಿದ್ದು ಪತ್ನಿ ಆಶಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.ಸಧ್ಯ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ದಿನೇಶ್ ಕುಮಾರ್ ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ…