
ರಾತ್ರೋ ರಾತ್ರಿ ಬಸ್ ತಂಗುದಾಣ ಡೆಮಾಲಿಷ್…ಸಾರ್ವಜನಿಕರ ಆಕ್ರೋಷ…
- TV10 Kannada Exclusive
- November 30, 2022
- No Comment
- 172

ರಾತ್ರೋ ರಾತ್ರಿ ಬಸ್ ತಂಗುದಾಣ ಡೆಮಾಲಿಷ್…ಸಾರ್ವಜನಿಕರ ಆಕ್ರೋಷ…
ಶ್ರೀರಂಗಪಟ್ಟಣ, ನ30,Tv10 ಕನ್ನಡ
ಗುಂಬಸ್ ಮಾದರಿ ಗೋಪುರ ನಿರ್ಮಿಸಿ ಭಾರಿ ವಿವಾದಕ್ಕೆ ಕಾರಣವಾಗಿ ರಾತ್ರೋರಾತ್ರಿ ಗೋಪುರ ತೆರುವಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬಸ್ ನಿಲ್ದಾಣ ತೆರುವಾಗಿ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಿ(ಮಂಟಿ) ಗ್ರಾಮದ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣ ರಾತ್ರೋ ರಾತ್ರಿ ತೆರುವಾಗಿದೆ.ಯಾವುದೇ ಅನುಮತಿ ಇಲ್ಲದೆ ಏಕಾಏಕಿ ತೆರುವಾದ ಕಾರಣ ಗುತ್ತಿಗೆದಾರನ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ನಿಂದ ಕೆ.ಆರ್.ಎಸ್ ಗೆ ಸಂಪರ್ಕ ಕಲ್ಪಿಸುವ PWD ರಸ್ತೆಯ ಪಕ್ಕದಲ್ಲಿ ತಾಲೂಕು ಪಂಚಾಯ್ತಿ ಅನುದಾನದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು.ಇದರ ಪಕ್ಕದಲ್ಲೇ ಮೂಡಾ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರ ಎಂ.ಎಸ್ ರೇವಣ್ಣ ಅವರು ಜೆಸಿಬಿ ಯಂತ್ರ ಬಳಸಿ ತೆರುವುಗೊಳಿಸಿದ್ದಾರೆ. ರಾತ್ರೋ ರಾತ್ರಿ ಬಸ್ ತಂಗುದಾಣ ಮಾಯವಾಗಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸ್ಥಳೀಯರು ಗ್ರಾ.ಪಂ ಪಿಡಿಓ ಅವರನ್ನು ಪ್ರಶ್ನಿಸಿದಾಗ ಪಂಚಾಯತಿ ವತಿಯಿಂದ ತೆರುವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಏಕಾಏಕಿ ಸಾರ್ವಜನಿಕ ಬಸ್ ನಿಲ್ದಾಣವನ್ನು ತೆರುವು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಹಾಗೂ ಇದೇ ಸ್ಥಳದಲ್ಲಿ ಗುತ್ತಿಗೆದಾರನ ಸ್ವಂತ ಹಣದಲ್ಲಿ ಪುನರ್ ನಿರ್ಮಿಸ ಬೇಕು ಎಂದು ಸ್ಥಳೀಯರು ತಾಕೀತು ಮಾಡಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್ ಅವರ ಸೂಚನೆಯಂತೆ ಸ್ಥಳಕ್ಕೆ ದಾವಿಸಿದ ಪ್ರಾಧಿಕಾರದ ಸೂಪರ್ ಡೆಂಟ್ ಇಂಜಿನಿಯರ್ ಚನ್ನಕೇಶವ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ಮಾಡಿ ಅನುಮತಿ ಇಲ್ಲದೆ ಬಸ್ ನಿಲ್ದಾಣ ತೆರುವು ಮಾಡಿದ್ದಾರೆ ಇದು ಕಾನೂನು ಬಾಹಿರ ಎಂದು ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ…