
ಮೈಸೂರಿನ ಐದು ಅಧಿಕಾರಿಗಳಿಗೆ ಮುಂಬಡ್ತಿ…ಸರ್ಕಾರದ ಆದೇಶ ಪತ್ರ ರವಾನೆ…
- MysoreTV10 Kannada Exclusive
- December 1, 2022
- No Comment
- 167

ಮೈಸೂರಿನ ಐದು ಅಧಿಕಾರಿಗಳಿಗೆ ಮುಂಬಡ್ತಿ…ಸರ್ಕಾರದ ಆದೇಶ ಪತ್ರ ರವಾನೆ…

ಮೈಸೂರು,ಡಿ1,Tv10 ಕನ್ನಡ
ರಾಜ್ಯದ ವಿವಿದ ಹುದ್ದೆಯಲ್ಲಿರುವ 71 ಅಧಿಕಾರಿಗಳಿಗೆ ಸರ್ಕಾರ ಮುಂಬಡ್ತಿ ನೀಡಿದೆ.ಈ ಪೈಕಿ ಮೈಸೂರಿನ ಐದು ಅಧಿಕಾರಿಗಳಿಗೆ ಪ್ರಮೋಷನ್ ಆದೇಶ ಸರ್ಕಾರ ಪ್ರಕಟಿಸಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ನಿಶ್ಚಯ್ ರವರನ್ನ ಕರ್ನಾಟಕ ಮೇಲ್ಮನವಿ ನ್ಯಾಧಿಕರಣ ಬೆಂಗಳೂರು ರಿಜಿಸ್ಟ್ರಾರ್ ಆಗಿ,ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ತಹಸೀಲ್ದಾರ್ ಆಗಿರುವ ಕೆ.ಜಾನ್ಸನ್ ರವರನ್ನ ಮಂಡ್ಯ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ,ಸ್ಥಳ ನಿರೀಕ್ಷಣೆಯಲ್ಲಿದ್ದ ಜೆ.ಮಹೇಶ್ ರವರನ್ನ ಮೈಸೂರು ಕಾಡಾ ಕಚೇರಿಯ ಸಹಾಯಕ ಆಡಳಿತಾಧಿಕಾರಿಯಾಗಿ,ಸ್ಥಳ ನಿರೀಕ್ಷಣೆಯಲ್ಲಿದ್ದ ರಕ್ಷಿತ್ ಕೆ.ಆರ್.ರವರನ್ನ ಮೈಸೂರು ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ತಹಸೀಲ್ದಾರ್ ಆರ್.ಮಂಜುನಾಥ್ ರನ್ನ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿ ಮುಂಬಡ್ತಿ ನೀಡಲಾಗಿದೆ…