
ಬೆಂಗಳೂರಿನಲ್ಲಿ 10 ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ…ಭಿಕ್ಷಾಪಾತ್ರೆ ಪ್ರದರ್ಶಿಸಿ ಆಕ್ರೋಷ…
- TV10 Kannada Exclusive
- December 1, 2022
- No Comment
- 91
ಬೆಂಗಳೂರಿನಲ್ಲಿ 10 ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ…ಭಿಕ್ಷಾಪಾತ್ರೆ ಪ್ರದರ್ಶಿಸಿ ಆಕ್ರೋಷ…
ಬೆಂಗಳೂರು,ಡಿ1,Tv10 ಕನ್ನಡ
ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ 10 ನೇ ದಿನಕ್ಕೆ ಕಾಲಿರಿಸಿದೆ.ಭಿಕ್ಷಾಪಾತ್ರೆ ಪ್ರದರ್ಶಿಸಿ ನಾವು ಭಿಕ್ಷುಕರಲ್ಲ ಅನಗನದಾತರು ಎಂಬ ಸಂದೇಶ ಸರ್ಕಾರಕ್ಕೆ ರವಾನಿಸಿದರು.
ಕಬ್ಬು ಎಫ್ ಆರ್ ಪಿ ದರ ಎರಿಕೆ, ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡುವುದು ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ.ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಪಡೆದು ಯಾವುದೇ ನಿರ್ಧಾರ ಪ್ರಕಟಿಸಿದಿರುವುದನ್ನ ಕಬ್ಬು ಬೆಳೆಗಾರರ ಸಂಘ ಖಂಡಿಸಿದೆ.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು 7-50 ಕೋಟಿ ಟನ್ ಕಬ್ಬು ಬೆಳೆದು 78 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿ, ಕಬ್ಬು ಬೆಳೆದ ರೈತ ಬಿಕ್ಷುಕರಾಗುತ್ತಿದ್ದಾನೆ, ರೈತರ ಮತ ಭಿಕ್ಷೆ ಬೇಡುವ ಸರ್ಕಾರ ರೈತರ ಮೂಗಿಗೆ ತುಪ್ಪ ಸವರೋ ಕೆಲಸ ಮಾಡುತ್ತಿದ್ದಾರೆ , ವರ್ಷದಲ್ಲಿ 30000 ಕೋಟಿ ವೈಹಿವಾಟು ನಡೆಸುವ ರಾಜ್ಯ ಸರ್ಕಾರಕ್ಕೆ 5000 ಕೋಟಿ ತೆರಿಗೆ ಬರುತ್ತಿದೆ ಆದರೂ ನಿರ್ಲಕ್ಷತನ ತೋರುತ್ತಿದೆ ಎಂದು ಆರೋಪಿಸಿ ಭಿಕ್ಷಾಟನೆ ಮಾಡುವಂತೆ ಅಣಕು ಪ್ರದರ್ಶನ ಮಾಡಿ ಸರ್ಕಾರವನ್ನ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ
ರೈತರತ್ನ ಕುರುಬೂರು ಶಾಂತಕುಮಾರ್, ಸುರೇಶ್ ಮ ಪಾಟೀಲ್,
ಅತ್ತಹಳ್ಳಿ ದೇವರಾಜ್,
ಆಶೂಕಮೇಟಿ, ಗಜೇಂದ್ರ ಸಿಂಗ್, ದೇವರಾಜ್ ಬರಡನಪುರ ನಾಗರಾಜ್, ವೆಂಕಟಲಕ್ಷ್ಮಿ, ದೇವಮಣ್ಣಿ,
ಕೆಂಡಗಣಸ್ವಾಮಿ
ಮತ್ತಿತರರು ಭಾಗವಹಿಸಿದ್ದರು…