ಚಿರತೆ ದಾಳಿ…ಯುವತಿ ಬಲಿ…ಗ್ರಾಮಸ್ಥರ ಆಕ್ರೋಷ…
- CrimeMysore
- December 1, 2022
- No Comment
- 113
ಚಿರತೆ ದಾಳಿ…ಯುವತಿ ಬಲಿ…ಗ್ರಾಮಸ್ಥರ ಆಕ್ರೋಷ…
ತಿ.ನರಸೀಪುರ,ಡಿ1,Tv10 ಕನ್ನಡ
ಟಿ.ನರಸೀಪುರ ತಾಲೂಕು ಕೆಬ್ಬೆ ಗ್ರಾಮದಲ್ಲಿ ಯುವತಿ ಮೇಲೆ ಚಿರತೆ ದಾಳಿ ನಡೆಸಿದೆ.ಬಹಿರ್ದೆಸೆಗೆ ತೆರಳಿದ್ದ ಯುವತಿ ಮೇಲೆ ಚಿರತೆ ದಾಳಿ ನಡೆಸಿದೆ.ತೀವ್ರಗಾಯಗೊಂಡ ಯುವತಿಯನ್ನ ಟಿ.ನರಸೀಪುರ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಯುವತಿ ಮೇಲೆ ಚಿರತೆ ದಾಳಿ ಪ್ರಕರಣ.ಮೇಘನ(20) ಮೃತ ದುರ್ದೈವಿ.
ನರಸೀಪುರ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಆಗಮಿಸಿದ ಶಾಸಕ ಅಶ್ವಿನ್ ಕುಮಾರ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ.
ಅರಣ್ಯ ಇಲಾಖೆ,ತಾಲ್ಲೂಕು ಆಡಳಿತ ವಿರುದ್ಧ ದಿಕ್ಕಾರ ಕೂಗಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಉಸ್ತುವಾರಿ ಸಚಿವರು,ಅರಣ್ಯ ಇಲಾಖೆ ಸಚಿವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಮೇಘನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ…