ಎನ್.ಆರ್.ಪೊಲೀಸರ ಕಾರ್ಯಾಚರಣೆ…ಐವರು ಅಪಹರಣಕಾರರ ಬಂಧನ…
- CrimeMysore
- December 3, 2022
- No Comment
- 189
ಎನ್.ಆರ್.ಪೊಲೀಸರ ಕಾರ್ಯಾಚರಣೆ…ಐವರು ಅಪಹರಣಕಾರರ ಬಂಧನ…
ಮೈಸೂರು,ಡಿ3,Tv10 ಕನ್ನಡ :
ಮೈಸೂರಿನ ಎನ್ ಆರ್ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ
ಐವರು ಅಪಹರಣಕಾರರ ಬಂಧನವಾಗಿದೆ.ಬಂಧಿತರಿಂದ
1 ಹುಂಡೈ ಕಾರು, 1 ದ್ವಿಚಕ್ರ ವಾಹನ, 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಹಣಕ್ಕೆ ಬೇಡಿಕೆ ಇಡುವ ಉದ್ದೇಶದಿಂದ ಉದ್ಯಮಿಯೊಬ್ಬರನ್ನು ಅಪಹರಿಸಲು ಯತ್ನಿಸಿ ವಿಫಲರಾಗಿದ್ದ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಕಳೆದ ನವೆಂಬರ್ 24ರಂದು ಉದ್ಯಮಿ ಒಬ್ಬರನ್ನು ಅವರ ಲಾರಿ ಚಾಲಕನೇ ಇತರ ಸಹಚರರೊಂದಿಗೆ ಸೇರಿಕೊಂಡು ಅಪಹರಣಕ್ಕೆ ಯತ್ನಿಸಿದ್ದ.
ಬೆಂಗಳೂರು-ಮೈಸೂರು ಹೈವೇಯಲ್ಲಿರುವ ಮಣಿಪಾಲ್ ಆಸ್ಪತ್ರೆ ಸಿಗ್ನಲ್ ಬಳಿಯಲ್ಲಿ ಉದ್ಯಮಿಯ ಅಪಹರಣಕ್ಕೆ ಯತ್ನಿಸಿದ್ದರು.
ಆದರೆ ಉದ್ಯಮಿಯ ಅಪಹರಣ ಯತ್ನ ವಿಫಲವಾಗಿತ್ತು.ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಹೆಜ್ಜೆ ಜಾಡು ಹಿಡಿದು ಸಾಗಿದ್ದ ಪೊಲೀಸರ ತಂಡಕ್ಕೆ ಐವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ…