
ಚಿರತೆ ಹಾವಳಿ:ಸಂಜೆ 5 ಗಂಟೆ ನಂತರ ಮನೆಯಿಂದ ಹೊರಬರಬೇಡಿ…ಕೇತುಪುರ ಗ್ರಾ.ಪಂ.ಯಿಂದ ಮೈಕ್ ಪ್ರಚಾರ…
- MysoreTV10 Kannada Exclusive
- December 3, 2022
- No Comment
- 130
ಚಿರತೆ ಹಾವಳಿ:ಸಂಜೆ 5 ಗಂಟೆ ನಂತರ ಮನೆಯಿಂದ ಹೊರಬರಬೇಡಿ…ಕೇತುಪುರ ಗ್ರಾ.ಪಂ.ಯಿಂದ ಮೈಕ್ ಪ್ರಚಾರ…
ಬನ್ನೂರು,ಡಿ3,Tv10 ಕನ್ನಡ
ಚಿರತೆ ಹಾವಳಿಗೆ ಟಿ.ನರಸೀಪುರ ಹಾಗೂ ಬನ್ನೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತಿಗೆ ಒಳಗಾಗಿದ್ದಾರೆ.
ಈಗಾಗಲೇ ಟಿ.ನರಸೀಪುರ ವ್ಯಾಪ್ತಿಯಲ್ಲಿ ಇಬ್ಬರನ್ನ ಬಲಿ ಪಡೆದಿವೆ.ಚಿರತೆ ಹಾವಳಿಯಿಂದ ಬೆಚ್ಚಿಬಿದ್ದಿರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.ಸಂಜೆ 5 ಗಂಟೆ ನಂತರ ಮನೆಯಿಂದ ಹೊರಗೆ ಬಾರದಂತೆ ಗ್ರಾಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.ಕೆಲವು ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡುತ್ತಿದ್ದರೆ ಕೆಲವು ಗ್ರಾಮಗಳಲ್ಲಿ ಪಾಂಪ್ಲೆಟ್ ಗಳನ್ನ ಹಂಚಲಾಗುತ್ತಿದೆ.ಮನೆಗಳ ಮೇಲೆ ನೋಟೀಸ್ ಗಳನ್ನೂ ಸಹ ಅಂಟಿಸಲಾಗುತ್ತಿದೆ.ಅಲ್ಲದೆ ಹೆಲ್ಪ್ ಲೈನ್ ಗಳನ್ನೂ ಸಹ ಬಳಸಿಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.ಮನೆ ಮನೆಗಳಿಗೆ ತೆರಳಿ ಪಾಂಪ್ಲೆಟ್ ಗಳನ್ನ ನೀಡಿ ಎಚ್ಚರಿಕೆ ನೀಡಲಾಗುತ್ತಿದೆ.ಟಿ.ನರಸೀಪುರದ ಮಲ್ಲಿಕಾರ್ಜುನ ಬೆಟ್ಟದಲ್ಲಿ ಓರ್ವ ಯುವಕ ಹಾಗೂ ಕೆಬ್ಬೆಹುಂಡಿ ಗ್ರಾಮದಲ್ಲಿ ಓರ್ವ ಯುವತಿಯನ್ನ ಬಲಿ ಪಡೆದಿರುವ ನರ ಭಕ್ಷಕ ಚಿರತೆಯಿಂದ ಮುಕ್ತಿ ಪಡೆಯಲು ಗ್ರಾಮ ಪಂಚಾಯ್ತಿಗಳು ಮೈಕ್ ಪ್ರಚಾರ ಹಾಗೂ ಭಿತ್ತಿಚಿತ್ರದ ಮೊರೆ ಹೋಗಿವೆ.ಕೇತುಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೈಕ್ ಮೂಲಕ ಪ್ರಚಾರ ಮಾಡಲಾಗುತ್ತಿದೆ.ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿರುವ ಹಿನ್ನಲೆ ಸಂಜೆ 5 ಗಂಟೆ ನಂತರ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬಾರದಂತೆ ಪ್ರಚಾರ ಮಾಡಲಾಗುತ್ತಿದೆ.ಅರಣ್ಯವಿಲಾಖೆ ಸಿಬ್ಬಂದಿಗಳ ಮೊಬೈಲ್ ನಂಬರ್ ಗಳನ್ನ ಮುದ್ರಿಸಿ ಚಿರತೆ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಲಾಗುತ್ತಿದೆ…