*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…”
- MysoreTV10 Kannada Exclusive
- December 7, 2022
- No Comment
- 132
*ಎನ್.ಆರ್.ಪೊಲೀಸ್ ಠಾಣೆಯಿಂದ ಅಪರಾಧ ತಡೆ ಮಾಸಾಚರಣೆ ಆಚರಣೆ…ವಿಧ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ಖಾಕಿ ಪಡೆ…”
ಮೈಸೂರು,ಡಿ7,Tv10 ಕನ್ನಡ
ಎನ್.ಆರ್.ಪೊಲೀಸ್ ಠಾಣೆಯಲ್ಲಿ ಇಂದು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ರಾಜೇಂದ್ರನಗರ ಕರ್ನಾಟಕ ಪಬ್ಲಿಕ್ ಶಾಲೆ ಮಕ್ಕಳಿಗೆ ಅಪರಾಧ ತಡೆ ಕ್ರಮಗಳ ಬಗ್ಗೆ ಪೊಲೀಸರು ಅರಿವು ಮೂಡಿಸಿದರು.
ಶಾಲಾ ಮಕ್ಕಳು ಶಿಕ್ಷಕ ವೃಂದ ನರಸಿಂಹರಾಜ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳೊಂದಿಗೆ ಜಾಥಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೂ ಅರಿವು ಮೂಡಿಸಲಾಯಿತು. ರಾಜೇಂದ್ರನಗರ ವೃತ್ತ, ಗಾಯತ್ರಿ ಪುರಂರಾಮ ಮಂದಿರ, ಕುರಿಮಂಡಿ ಸರ್ಕಲ್, ಶಂಕರ್ ನರ್ಸಿಂಗ್ ಹೋಮ್ ಸರ್ಕಲ್ ಮುಖಾಂತರ ಶಾಲೆ ವರೆಗೆ ಜಾಥಾ ನಡೆಸಿ ಸರ್ವಜನಿಕರಿಗೆ ಕರ ಪತ್ರ ಗಳನ್ನು ನೀಡಿ ಅಪರಾಧ ಗಳನ್ನು ತಡೆ ಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅಜರುದ್ಧಿನ್, ಪಿ ಎಸ್ ಐ ಗಳಾದ ಜೈಕೀರ್ತಿ. ಎಂ, ಗಂಗಾಧರ್, ಎ ಎಸ್ ಐ ರವಿ ಹಾಗೂ ಸಿಬಂದಿಗಳಾದ ಮಂಜುನಾಥ್, ಸುನಿಲ್, ಮಹೇಶ್, ಪ್ರವೀಣ್, ಗಿರೀಶ್ ಭಾಗವಹಿಸಿದ್ದರು, ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀಮತಿ ಶ್ವೇತ, ಶ್ರೀ ಸಣ್ಣಸ್ವಾಮಿ ಹಾಗೂ ಇತರ ಶಿಕ್ಷಕರು ಸಾಥ್ ನೀಡಿದರು…