ಕಬ್ಬಿನ ದರ 50 ರೂ ಹೆಚ್ಚಳಕ್ಕೆ ರೈತರ ಅಸಮಾಧಾನ…ಸರ್ಕಾದ ಆದೇಶ ಸುಟ್ಟು ಆಕ್ರೋಷ…
- TV10 Kannada Exclusive
- December 8, 2022
- No Comment
- 108
ಕಬ್ಬಿನ ದರ 50 ರೂ ಹೆಚ್ಚಳಕ್ಕೆ ರೈತರ ಅಸಮಾಧಾನ…ಸರ್ಕಾದ ಆದೇಶ ಸುಟ್ಟು ಆಕ್ರೋಷ…
ಬೆಂಗಳೂರು,ಡಿ8,Tv10 ಕನ್ನಡ
ಕಬ್ಬಿಗೆ ಹೆಚ್ಚುವರಿಯಾಗಿ 50 ರೂ ನಿಗದಿ ಪಡಿಸಿರುವ ಸರ್ಕಾರದ ಆದೇಶ ಸುಟ್ಟು ರೈತರು ಇಂದು ಆಕ್ರೋಷ ವ್ಯಕ್ತಪಡಿಸಿದರು.ಬೆಂಗಳೂರಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 17ನೇ ದಿನಕ್ಕೆ ತಲುಪಿದೆ.ಇಂದು ರೈತರು ತಲೆ ಮೇಲೆ ಕಬ್ಬಿನ ಪಿಂಡಿ ಹೂತ್ತು ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ದರಕೆ ಹೆಚ್ಚುವರಿಯಾಗಿ ಟನ್ಗೆ 50 ರೂ ನೀಡಲು ಹೊರಡಿಸಿರುವ ಆದೇಶ ಧಿಕ್ಕರಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಕ್ಕರೆ ಕಾರ್ಖಾನೆ ಮಾಲೀಕರಿಂದ ಹೆಚ್ಚುವರಿ ಹಣ ಕೊಡಿಸಲು ಸರ್ಕಾರಕ್ಕೆ ಧೈರ್ಯವಿಲ್ಲದಿದ್ದರೆ ಕಬ್ಬು ಬೆಳೆಗಾರರ ವಹಿವಾಟಿನಿಂದ ಸರ್ಕಾರಕ್ಕೆ ಬರುವ ತೆರಿಗೆ 5,000 ಕೋಟಿ ಹಣದಿಂದ
ಹೆಚ್ಚುವರಿ ಹಣ ನೀಡಲಿ, ಹಿಂದೆ ಬೆಳಗಾವಿ ಅಧಿವೇಶನದ ವೇಳೆ ರೈತನೊಬ್ಬ ಪ್ರಾಣ ಕಳೆದುಕೊಂಡಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಟನ್ ಗೆ 160 ಹೆಚ್ಚುವರಿ ಹಣ ಘೋಷಣೆ ಮಾಡಿ 1600 ಕೋಟಿ ರೈತರಿಗೆ ನೀಡಿದ್ದಾರೆ ಅದರಂತೆ ಪ್ರಸಕ್ತ ಸರ್ಕಾರವು ನೀಡಲಿ
ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು
ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 200 ರಿಂದ 300 ರೈತರ ಹಣದಲ್ಲಿ ಮುರಿದು ಕೊಳ್ಳುತ್ತಿದ್ದಾರೆ, ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡು ರೈತರ ರಕ್ಷಣೆ ಮಾಡಲಿ ಎಂದು ಆಗ್ರಹಿಸಿದರು.
ಇಂದಿನ ಪ್ರತಿಭಟನೆಯಲ್ಲಿ ಉಳುವಪ್ಪ ಬಳಗೇರ, ರಮೇಶ್ ಹೂಗಾರ್, ಜಗದೀಶ್ ಪಾಟೀಲ್, ಸುರೇಶ್ ಮಾ ಪಾಟೀಲ್,
ಹತ್ತಳ್ಳಿ ದೇವರಾಜ್,
ಬರಡನ್ ಪುರ ನಾಗರಾಜ್,
ಶರಣು ಬಿಲ್ಲದ್, ಮುಂತಾದವರಿದ್ದರು…