
ಮಾಂಡೋಸ್ ಆಯ್ತು ಮತ್ತೊಂದು ಚಂಡಮಾರುತ ಅಪ್ಪಳಿಸುವ ಸೂಚನೆ…ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ…
- TV10 Kannada Exclusive
- December 13, 2022
- No Comment
- 137
ಮೈಸೂರು,ಡಿ13,Tv10 ಕನ್ನಡ
ಈಗಾಗಲೇ ಮಾಂಡೋಸ್ ಚಂಡಮಾರುತ ಅಪ್ಪಳಿಸಿದೆ.ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮತ್ತಷ್ಟು ದಿನಗಳ ಕಾಲ ಹವಾಮಾನ ವೈಪರೀತ್ಯ ಮುಂದುವರೆಯಲಿದೆ.ಇಂತಹ ಸಂಧರ್ಭದಲ್ಲಿ ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಸಲಹೆಯನ್ನ ಬಿಡುಗಡೆ ಮಾಡಿದೆ.
ಮಾಡಬೇಕಾದದ್ದು..
1.ಬೆಚ್ಚಗಿನ ನೀರು ಸೇವಿಸುವುದು/ಆದಷ್ಟು ಸೂಪ್ ಗಳನ್ನ ಸೇವಿಸುವುದು.
2.ಸುಲಭವಾಗಿ ಜೀರ್ಣಿಸುವ/ ಆಗತಾನೆ ತಯಾರಿಸಿದ ಶಹಾರ ಪದಾರ್ಥಗಳನ್ನ ಸೇವಿಸುವುದು
3.ಸ್ವೆಟರ್,ಸಾಕ್ಸ್,ಕೈಗವಸುಗಳನ್ನ ಧರಿಸುವುದು
4.ಹೊರಸಂಚಾರ ತಪ್ಪಿಸುವುದು
5.ನೆಗಡಿ,ಕೆಮ್ಮು,ಜ್ವರ ಲಕ್ಷಣ ಇರುವವರಿಂದ ಅಂತರ ಕಾಯ್ದುಕೊಳ್ಳುವುದು
6.ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಅಡ್ಡ ಹಿಡಿಯುವುದು
7.ಕೈಗಳನ್ನ ಆಗಾಗ ಸೋಪ್ ಗಳಿಂದ ಸ್ವಚ್ಛಗೊಳಿಸುವುದು
8.ಜ್ವರ/ಫ್ಲೂ ಲಕ್ಷಣ ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆಯುವುದು
ಮಾಡಬಾರದ್ದು
1.ತಣ್ಣಗಿನ ಪಾನೀಯ,ಐಸ್ ಕ್ರೀಂ ತ್ಯಜಿಸುವುದು
2.ರೆಫ್ರಿಜರೇಟರ್ ಅಥವಾ ತಂಪಾದ ನೀರು ಸೇವಿಸಬಾರದು
3.ಮಳೆಯಲ್ಲಿ ನೆನೆಯುವುದು,ಶೀತಗಾಳಿಗೆ ಮೈ ಒಡ್ಡುವುದು
4.ಹೊರಾಂಗಣ ಪ್ರವಾಸ ರದ್ದುಗೊಳಿಸುವುದು
5.ಗಿರಿಧಾಮಗಳಿಗೆ ಹೋಗುವುದು
6.ಮಸಾಲಾಯುಕ್ತ ಪದಾರ್ಥ/ ಜಂಕ್ ಫುಡ್ ವರ್ಜಿಸುವುದು
ಈ ಸಲಹೆಗಳನ್ನ ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ.ರಂದೀಪ್ ಅಧಿಕೃತವಾಗಿ ಸೂಚನೆ ಹೊರಡಿಸಿದ್ದಾರೆ…